ಶಿವಮೊಗ್ಗ: ನಗರದ ಅಗಮುಡಿ ಕಲ್ಯಾಣ ಮಂಟಪದ ಸಮೀಪದಲ್ಲಿರುವ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಪೊಲೀಸ್ ಸಿಬ್ಬಂದಿ ಸಕಾಲದಲ್ಲಿ ರಕ್ಷಣೆ ಮಾಡಿರುವ ಘಟನೆ ವರದಿಯಾಗಿದೆ. ಕಲ್ಯಾಣ ಮಂಟಪದ ಸಮೀಪದಲ್ಲಿರುವ ಮನೆಯಲ್ಲಿ ಫ್ಯಾನಿಗೆ ನೇಣು […]
Category: Shimoga
ಶಿವಮೊಗ್ಗ ದಸರಾ ಸಂಭ್ರಮದಲ್ಲಿ ನಟ ಶಿವರಾಜ್ ಕುಮಾರ್ ಭಾಗಿ : ಹೇಮಂತ್, ಅನುರಾಧ ಭಟ್ ತಂಡದಿಂದ ಮ್ಯೂಸಿಕಲ್ ನೈಟ್
ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ದಸರಾ ಅಂಗವಾಗಿ ಆಗಸ್ಟ್ 28ರ ಭಾನುವಾರ ಸಂಜೆ 5ಗಂಟೆಗೆ ನಗರದ ಫ್ರೀಡಂ ಪಾರ್ಕ್ ನಲ್ಲಿ ಏರ್ಪಡಿಸಲಾಗಿರುವ ಮ್ಯೂಸಿಕಲ್ ನೈಟ್ ಅದ್ದೂರಿ ಕಾರ್ಯಕ್ರಮಕ್ಕೆ ಖ್ಯಾತ ನಟ ಡಾ.ಶಿವರಾಜ್ ಕುಮಾರ್ ಅವರು […]
ಶಿವಮೊಗ್ಗ ದಸರಾ : ಆನೆಗಳ ತಾಲೀಮು – ದಾರಿಯುದ್ದಕ್ಕೂ ಜನರಿಗೆ ದರ್ಶನ
ಶಿವಮೊಗ್ಗ: ಮೈಸೂರು ಹೊರತುಪಡಿಸಿ, ದಸರಾದ ಜಂಬೂ ಸವಾರಿ ವೈಭವವನ್ನು ನೋಡಲು ಸಾಧ್ಯವಿರುವುದು ಶಿವಮೊಗ್ಗದ ನಾಡಹಬ್ಬದಲ್ಲಿ ಮಾತ್ರ. ಇಲ್ಲಿ ಪ್ರತಿ ವರ್ಷ ಮೂರು ಆನೆಗಳನ್ನು ಕರೆತರುವ ಸಂಪ್ರದಾಯ ಪಾಲಿಸಲಾಗುತ್ತಿದೆ. ಈ ವರ್ಷವೂ ದಸರಾ ಜಂಬೂಸವಾರಿಗೆ ಸಕ್ರೆಬೈಲು ಬಿಡಾರದ […]
ಹೊಸನಗರ : ಸಮೀಕ್ಷೆ ಕಾರ್ಯದಲ್ಲಿ ಕರ್ತವ್ಯ ಲೋಪ ಹಿನ್ನೆಲೆ… ಕ್ಷೇತ್ರ ಸಮನ್ವಯಾಧಿಕಾರಿ ಅಮಾನತು
ಹೊಸನಗರ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಹಿನ್ನೆಲೆ ಸಮನ್ವಯಾಧಿಕಾರಿ ರಂಗನಾಥ್.ಎಂ ಅವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ರಂಗನಾಥ್.ಎಂ ಅವರು ಹೊಸನಗರ ತಾಲೂಕು ಬಿ.ಆರ್.ಸಿ. ಕೇಂದ್ರದ ಕ್ಷೇತ್ರ ಸಮನ್ವಯಾಧಿಕಾರಿ ಆಗಿ ಜವಾಬ್ದಾರಿ ನಿಭಾಯಿಸುತ್ತಿದ್ದರು. ಪೂರ್ವಾನುಮತಿ ಪಡೆಯದೆ ರಜೆ ಹಾಕಿದ್ದು, ದೂರವಾಣಿ ಕರೆಗು ಸ್ಪಂದಿಸಲಿಲ್ಲ. ಇದರಿಂದ ಸಮೀಕ್ಷೆ ಕಾರ್ಯಕ್ಕೆ ತೊಡಕಾಗಿದೆ. ಈ ಹಿನ್ನೆಲೆ ತಕ್ಷಣದಿಂದಲೇ ರಂಗನಾಥ್.ಎಂ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಶಿವಮೊಗ್ಗ: ಮನೆಗಳ್ಳತನ – ಬಂಧನ
ಶಿವಮೊಗ್ಗ: ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೊಪಾಲ ಗೌಡ ಬಡಾವಣೆ ‘ಸಿ’ ಬ್ಲಾಕ್ ನಲ್ಲಿ ನಡೆದಿದ್ದ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ಕಳುವಾಗಿದ್ದ ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಗೋಪಾಳದ ವಿಶ್ವೇಶ್ವರನಗರದ ಆಟೋ […]
ಮೂರನೆ ಬಾರಿಗೆ ವಿಶ್ವ ಶೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಶಿವಮೊಗ್ಗದ ಡಾ.ವರುಣ್ ಕುಮಾರ್
ಶಿವಮೊಗ್ಗ: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಪ್ರಕಟಿಸಿದ ೨೦೨೫ನೇ ಸಾಲಿನ ವಿಶ್ವದ ಶೇ.೨ ರಷ್ಟು ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ಶಿವಮೊಗ್ಗ ನಗರದ ಡಾ.ವರುಣ್ ಕುಮಾರ್ ಆರ್ ಎಸ್ […]
ಶಿವಮೊಗ್ಗ : ಕಾರು ಚಾಲನೆ ವೇಳೆಯೇ ಹೃದಯಾಘಾತ… ಚಾಲಕ ಮೃತ್ಯು
ಶಿವಮೊಗ್ಗ : ಕಾರು ಚಾಲನೆ ಮಾಡುವಾಗಲೇ ಹೃದಯಾಘಾತ ಸಂಭವಿಸಿ ಕಾರು ಚಾಲಕ ಸಾವನಪ್ಪಿರುವ ಘಟನೆ ಶಿವಮೊಗ್ಗ ನಗರದ ಪೊಲೀಸ್ ಚೌಕಿ ಬಳಿ ನಡೆದಿದೆ. ಶಿವಮೊಗ್ಗದ ಹುಡ್ಕೋ ಕಾಲೋನಿ ನಿವಾಸಿ 45 ವರ್ಷದ ಮಲ್ಲಿಕಾರ್ಜುನ್ ಮೃತ ಕಾರು ಚಾಲಕ. ನಗರದ ವಿನೋಬನಗರ ಪೊಲೀಸ್ ಚೌಕಿ ಬಳಿ ಕಾರು ಚಾಲನೆ ಮಾಡುವಾಗ ಮಲ್ಲಿಕಾರ್ಜುನ್ ಗೆ ಎದೆ ನೋವು ಕಾಣಿಸಿಕೊಂಡಿದೆ, ಕೂಡಲೇ ವೈದ್ಯರನ್ನ ಸಂಪರ್ಕಿಸಲು ತೆರಳುವಾಗ ಕಾರಿನಲ್ಲೇ ಕುಸಿದು ಬಿದ್ದು ಸಾವನಪ್ಪಿದ್ದಾರೆ. ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ನೆಟ್ವರ್ಕ್ ಸಮಸ್ಯೆ, ಸಿಬ್ಬಂದಿ ಹೈರಾಣು
ಶಿವಮೊಗ್ಗ: ರಾಜ್ಯಾದ್ಯಂತ ಸೋಮವಾರದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಾರಂಭವಾಗಿದೆ. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿಯೂ ಸಹ ಸಮೀಕ್ಷೆ ಆರಂಭವಾಗಿದೆ. ಆದರೆ ಸರ್ವೆಗೆ ನೆಟ್ವರ್ಕ್ ಸಮಸ್ಯೆ ಕಾಡುತ್ತಿದೆ. ಇದರಿಂದ ಸರ್ವೆ ಕಾರ್ಯ ಕುಂಟುತ್ತಾ ಸಾಗಿದೆ. ಇಂದು […]
ಶಿವಮೊಗ್ಗ: ಜಿಎಸ್ಟಿ ಕಡಿತದಿಂದ ಜನಸಾಮಾನ್ಯರು, ವ್ಯಾಪಾರಿಗಳಿಗೆ ಅನುಕೂಲ : ವಿಜಯೇಂದ್ರ
ಶಿವಮೊಗ್ಗ: ಜಿಎಸ್ಟಿ ಕಡಿತದಿಂದ ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಜಿಎಸ್ಟಿಯ ಎರಡು ಹಂತದಲ್ಲಿನ ಕಡಿತದ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಇಂದು ನಡೆದ ಸಂಭ್ರಮಾಚರಣೆಯಲ್ಲಿ […]
ತ್ಯಾವರೆಕೊಪ್ಪಕ್ಕೆ ಬರಲಿದೆ ಬೆಂಗಾಲ್ ಹುಲಿ, ಸಿಂಹ
ಶಿವಮೊಗ್ಗ: ಪ್ರಾಣಿ ವಿನಿಯಮ ಯೋಜನೆಯಡಿ ತ್ಯಾವರೆ ಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಕೆಲವೇ ದಿನಗಳಲ್ಲಿ ಬಿಳಿ ಹುಲಿ, ಬೆಂಗಾಲ್ ಟೈಗರ್ ಹಾಗೂ ಸಿಂಹ ಆಗಮಿಸಲಿದೆ. ಇಂದೋರ್ ಮತ್ತು ಔರಂಗಾಬಾದ್ ಮೃಗಾಲಯದ ಅಧಿ ಕಾರಿಗಳು ಶನಿವಾರ ತ್ಯಾವರೆಕೊಪ್ಪದ […]
