Trending

ಶಿವಮೊಗ್ಗ : ಕಾರು ಚಾಲನೆ ವೇಳೆಯೇ ಹೃದಯಾಘಾತ… ಚಾಲಕ ಮೃತ್ಯು

Spread the love

ಶಿವಮೊಗ್ಗ : ಕಾರು ಚಾಲನೆ ಮಾಡುವಾಗಲೇ ಹೃದಯಾಘಾತ ಸಂಭವಿಸಿ ಕಾರು ಚಾಲಕ ಸಾವನಪ್ಪಿರುವ ಘಟನೆ ಶಿವಮೊಗ್ಗ ನಗರದ ಪೊಲೀಸ್ ಚೌಕಿ ಬಳಿ ನಡೆದಿದೆ.

ಶಿವಮೊಗ್ಗದ ಹುಡ್ಕೋ ಕಾಲೋನಿ ನಿವಾಸಿ 45 ವರ್ಷದ ಮಲ್ಲಿಕಾರ್ಜುನ್‌ ಮೃತ ಕಾರು ಚಾಲಕ. ನಗರದ ವಿನೋಬನಗರ ಪೊಲೀಸ್ ಚೌಕಿ ಬಳಿ ಕಾರು ಚಾಲನೆ ಮಾಡುವಾಗ ಮಲ್ಲಿಕಾರ್ಜುನ್‌ ಗೆ ಎದೆ ನೋವು ಕಾಣಿಸಿಕೊಂಡಿದೆ, ಕೂಡಲೇ ವೈದ್ಯರನ್ನ ಸಂಪರ್ಕಿಸಲು ತೆರಳುವಾಗ ಕಾರಿನಲ್ಲೇ ಕುಸಿದು ಬಿದ್ದು ಸಾವನಪ್ಪಿದ್ದಾರೆ.

ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

[pj-news-ticker]