Trending

ಶಿವಮೊಗ್ಗ: ಜಿಎಸ್​ಟಿ ಕಡಿತದಿಂದ ಜನಸಾಮಾನ್ಯರು, ವ್ಯಾಪಾರಿಗಳಿಗೆ ಅನುಕೂಲ : ವಿಜಯೇಂದ್ರ

Spread the love

ಶಿವಮೊಗ್ಗ: ಜಿಎಸ್​​ಟಿ ಕಡಿತದಿಂದ ಜನಸಾಮಾನ್ಯರಿಗೆ, ವ್ಯಾಪಾರಿಗಳಿಗೆ ತುಂಬಾ ಅನುಕೂಲವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಜಿಎಸ್​ಟಿಯ ಎರಡು ಹಂತದಲ್ಲಿನ ಕಡಿತದ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಇಂದು ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ, ಜನರು, ವ್ಯಾಪಾರಿಗಳಿಗೆ ಅವರು ಸಿಹಿ ಹಂಚಿದರು.

ನಂತರ ಗಾಂಧಿ ಬಜಾರ್​​ನ ಅಂಗಡಿಗಳಿಗೆ ತೆರಳಿ, ಸಿಹಿ ಹಂಚುವ ಜೊತೆಗೆ ಜಿಎಸ್​​ಟಿ ಕಡಿತದ ಬಗ್ಗೆ ತಿಳಿಸಿಕೊಟ್ಟರು.

ನಂತರ ಮಾತನಾಡಿದ ವಿಜಯೇಂದ್ರ, ದೇಶದಲ್ಲಿ ಇಂದಿನಿಂದ ಜಿಎಸ್​​ಟಿ ಸುಧಾರಣೆಯ ಅನುಷ್ಟಾನ ಆಗುತ್ತಿದೆ. ಇಂದು ಐತಿಹಾಸಿಕ ದಿನ. ಇದನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.

ಜಿಎಸ್​​ಟಿ ಸುಧಾರಣೆಯ ಬಗ್ಗೆ ಜನರಿಗೆ ಹಾಗೂ ವ್ಯಾಪಾರಿಗಳಿಗೆ ತಿಳಿಸಿದ್ದೇವೆ. 2047ನೇ ಇಸವಿಗೆ ವಿಕಸಿತ ಭಾರತ ಪರಿವರ್ತನೆ ಆಗಬೇಕೆಂಬ ಮೋದಿಜಿ ಅವರ ಕನಸಿಗೆ ಜಿಎಸ್​​ಟಿ ಸುಧಾರಣೆ ಸಾಕಷ್ಟು ಸಹಾಯ ಮಾಡಲಿದೆ ಎಂದು ತಿಳಿಸಿದರು.

ಜಾತಿ ಸಮೀಕ್ಷೆ: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮುದಾಯದವರಿಗೆ ಜಾತಿ ಕಲಂ ಕುರಿತು ಉಂಟಾಗಿರುವ ಗೊಂದಲದ ಕುರಿತು ಪ್ರತಿಕ್ರಿಯಿಸಿ, ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ಕುರಿತು ಮಾಹಿತಿ ಪಡೆದುಕೊಂಡು ಪ್ರತಿಕ್ರಿಯಿಸುವೆ ಎಂದರು.

ಶರಾವತಿ ಪಂಪ್ ಸ್ಟೋರೇಜ್ ಕುರಿತು ಶೀಘ್ರ ತೀರ್ಮಾನ: ಶರಾವತಿ ಪಂಪ್ ಸ್ಟೋರೇಜ್ ಕುರಿತು ನಮ್ಮ ಜಿಲ್ಲೆಯ ಸಂಸದರು, ನಮ್ಮ ಶಾಸಕರುಗಳ ಜೊತೆ ಚರ್ಚೆ ನಡೆಸಿ, ಇದರ ಬಗ್ಗೆ ನಮ್ಮ ನಿಲುವೇನು ಎಂಬುದರ ಬಗ್ಗೆ ತಿಳಿಸುತ್ತೇವೆ ಎಂದರು.

[pj-news-ticker]