Trending

ತಿರುಪತಿ ಲಡ್ಡು ಕಲಬೆರಕೆ : ದೆಹಲಿ ವ್ಯಾಪಾರಿ ಅಜಯ್ ಕುಮಾರ್ ಬಂಧನ

Spread the love

ತಿರುಪತಿ: ಟಿಟಿಡಿ ಲಡ್ಡುಗಳಲ್ಲಿ ಬಳಸಲಾಗುತ್ತಿದ್ದ ನಕಲಿ ತುಪ್ಪ ತಯಾರಿಕೆಗೆ ರಾಸಾಯನಿಕಗಳನ್ನು ಪೂರೈಸಿದ ಆರೋಪದ ಮೇರೆಗೆ ದೆಹಲಿ ಮೂಲದ ರಾಸಾಯನಿಕ ವ್ಯಾಪಾರಿ ಅಜಯ್ ಕುಮಾರ್ ಸುಗಂಧ ಅವರನ್ನು ಎಸ್‌ಐಟಿ ಬಂಧಿಸಿದೆ. ಪ್ರಕರಣದಲ್ಲಿ ಅವರು ಎ-16 ಆರೋಪಿ.

ತನಿಖೆಯ ಪ್ರಕಾರ, ಅಜಯ್ ಕುಮಾರ್ ಭೋಲೆಬಾಬಾ ಡೈರಿಯ ನಿರ್ದೇಶಕರಾದ ಪೋಮಿಲ್ ಜೈನ್ ಮತ್ತು ವಿಪಿನ್ ಜೈನ್‌ರೊಂದಿಗೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ದಕ್ಷಿಣ ಕೊರಿಯಾದಿಂದ ಆಮದು ಮಾಡಿಸಿದ್ದ ಮಾನೋಗ್ಲಿಸರೈಡ್ಗಳು, ಅಸಿಟಿಕ್ ಆಮ್ಲ ಮತ್ತು ವಿವಿಧ ಎಸ್ಟರ್ಗಳನ್ನು ತಮ್ಮ ಕಂಪನಿ ಹೆಸರಿನಲ್ಲಿ ಖರೀದಿ ಮಾಡಿ ಡೈರಿಗೆ ಪೂರೈಸುತ್ತಿದ್ದರು. ಪಾಮ್ ಎಣ್ಣೆಯನ್ನು ರಾಸಾಯನಿಕಗಳೊಂದಿಗೆ ಸಂಸ್ಕರಿಸಿ ಈ ಸಂಯುಕ್ತಗಳನ್ನು ಬಳಸಿ ನಕಲಿ ತುಪ್ಪ ತಯಾರಿಸಲಾಗುತ್ತಿತ್ತು.

ಈ ಕಲಬೆರಕೆ ತುಪ್ಪವನ್ನು ವೈಷ್ಣವಿ ಮತ್ತು ಎಆರ್ ಡೈರಿ ಎಂಬ ಬ್ರಾಂಡ್‌ಗಳ ಮೂಲಕ ಮಾರುಕಟ್ಟೆಗೆ ತಂದು, ನಂತರ ಟಿಟಿಡಿ ಲಡ್ಡು ತಯಾರಿಕೆಗೆ ಸರಬರಾಜು ಮಾಡಲಾಗುತ್ತಿತ್ತು ಎಂದು ಎಸ್‌ಐಟಿ ತಿಳಿಸಿದೆ.

ವಿಧಿವಿಜ್ಞಾನ ವಿಭಾಗ ನಡೆಸಿದ ಪರೀಕ್ಷೆಗಳಲ್ಲಿ, ಟಿಟಿಡಿಗೆ ಪೂರೈಸಿದ್ದ ತುಪ್ಪದಲ್ಲಿ ಶೇ.90 ಕ್ಕಿಂತ ಹೆಚ್ಚು ಪಾಮ್ ಎಣ್ಣೆ ಹಾಗೂ ಡೈರಿ ಉತ್ಪನ್ನಕ್ಕೆ ಹೊಂದಾಣಿಕೆಯಾಗದ ಸಂಶ್ಲೇಷಿತ ರಾಸಾಯನಿಕಗಳು ಪತ್ತೆಯಾಗಿವೆ.

[pj-news-ticker]