Trending

ಪ್ರಧಾನಿ ಮೋದಿ ಕಾಳಿ ದೇವಿಗೆ ಉಡುಗೊರೆಯಾಗಿ ನೀಡಿದ್ದ ಕಿರೀಟವನ್ನೇ ಎಗರಿಸಿದ ಕಳ್ಳ

Spread the love

ಢಾಕಾ: ಮೂರು ವರ್ಷಗಳ ಹಿಂದೆ ಕಾಳಿ ದೇವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಗೊರೆಯಾಗಿ ನೀಡಿದ್ದ ಚಿನ್ನದ ಕಿರೀಟವನ್ನು ಕಳ್ಳನೊಬ್ಬ ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಗುರುವಾರ(ಅ.11) ಮಧ್ಯಾಹ್ನ 2:30 ರ ಸುಮಾರಿಗೆ ಬಾಂಗ್ಲಾದೇಶದ ಸತ್ಖೈರಾದ ಶ್ಯಾಮನಗರದಲ್ಲಿರುವ ಜೆಶೋರೇಶ್ವರಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ದೇವಸ್ಥಾನದ ಆವರಣದೊಳಗೆ ನುಗ್ಗಿದ ಕಳ್ಳ ದೇವಸ್ಥಾನದೊಳಗೆ ಇದ್ದ ದೇವಿಯ ಶಿರದ ಮೇಲಿದ್ದ ಚಿನ್ನ ಲೇಪಿತ ಬೆಳ್ಳಿಯ ಕಿರೀಟವನ್ನು ಕಳವು ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ, ಸಂಜೆ ದೇವಸ್ಥಾನದ ಅರ್ಚಕರು ದೇವಸ್ಥಾನಕ್ಕೆ ಬಂದು ನೋಡಿದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ, ಬಳಿಕ ದೇವಳದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದ ವೇಳೆ ಕಳ್ಳನೋರ್ವ ದೇವಿಯ ಶಿರದಲ್ಲಿದ್ದ ಕಿರೀಟವನ್ನು ಎಗರಿಸಿರುವುದು ಗೊತ್ತಾಗಿದೆ.

ಮಾರ್ಚ್ 27, 2021 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಪ್ರವಾಸ ಕೈಗೊಂಡ ವೇಳೆ ಇಲ್ಲಿನ ಜೆಶೋರೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಈ ಸಂದರ್ಭದಲ್ಲಿ ಕಾಳಿ ಮಾತೆಗೆ ಚಿನ್ನ ಲೇಪಿತ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.

ದೇವಸ್ಥಾನದ ಸಿಸಿಟಿವಿ ದೃಶ್ಯಾ ಆಧರಿಸಿ ಪೊಲೀಸರು ಕಳ್ಳನ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

[pj-news-ticker]