Trending

ಭದ್ರಾವತಿ : ಪ್ರೀತಿಗೆ ವಿರೋಧ, ಪ್ರೇಮಿಗಳಿಂದ ಆತ್ಮಹತ್ಯೆ ಯತ್ನ : ಯುವತಿ ನೀರು ಪಾಲು, ಯುವಕ ಪಾರು

Spread the love

ಭದ್ರಾವತಿ : ತಾಲೂಕಿನ ಅಂತರಗಂಗೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತವಾದ ಕಾರಣಕ್ಕೆ ಪ್ರೇಮಿಗಳಿಬ್ಬರು ಚಾನಲ್‌ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಯುವತಿ ನೀರು ಪಾಲಾಗಿದ್ದಾಳೆ.

ಅಂತರಗಂಗೆ ಭೋವಿ ಕಾಲೋನಿ ನಿವಾಸಿ ಸ್ವಾತಿ (19 ವ) ನಾಪತ್ತೆಯಾಗಿದ್ದು, ಸೂರ್ಯ (20 ವ) ಬದುಕುಳಿದ್ದಾನೆ.

ಇಬ್ಬರೂ ನೆರೆಹೊರೆಯ ನಿವಾಸಿಗಳಾಗಿದ್ದು, ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿದ್ದು ಬುದ್ದಿವಾದ ಹೇಳಿದ್ದರು. ಇದರಿಂದ ಮನನೊಂದ ಜೋಡಿ ಇರುವೆ ಕ್ರಿಮಿನಾಶಕ ಸೇವಿಸಿ ಬಳಿಕ ಅಂತರಗಂಗೆಯ ಉಕ್ಕುಂದದಲ್ಲಿರುವ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆ ಮರದ ದಿಮ್ಮಿಯ ಸಹಾಯದಿಂದ ಸೂರ್ಯ ಪಾರಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾನೆ.

ನೀರುಪಾಲಾಗಿರುವ ಸ್ವಾತಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಸ್ವಾತಿ ಪ್ರಥಮ ಪದವಿ ಓದುತ್ತಿದ್ದರೆ, ಸೂರ್ಯ ಕೆಲಸದಲ್ಲಿದ್ದನು ಎನ್ನಲಾಗಿದೆ.

ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

[pj-news-ticker]