ಶಿವಮೊಗ್ಗ: ಪ್ರಾಣಿ ವಿನಿಯಮ ಯೋಜನೆಯಡಿ ತ್ಯಾವರೆ ಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಕೆಲವೇ ದಿನಗಳಲ್ಲಿ ಬಿಳಿ ಹುಲಿ, ಬೆಂಗಾಲ್ ಟೈಗರ್ ಹಾಗೂ ಸಿಂಹ ಆಗಮಿಸಲಿದೆ.
ಇಂದೋರ್ ಮತ್ತು ಔರಂಗಾಬಾದ್ ಮೃಗಾಲಯದ ಅಧಿ ಕಾರಿಗಳು ಶನಿವಾರ ತ್ಯಾವರೆಕೊಪ್ಪದ ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿಗಳ ವಿನಿಮಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅ.2ರಂದು ಔರಂಗಾಬಾದ್ ಮೃಗಾಲಯದಿಂದ ಒಂದು ಗಂಡು ಬಿಳಿ ಹುಲಿ, 2 ಹೆಣ್ಣು ಬೆಂಗಾಲ್ ಟೈಗರ್ಸ್, ಇಂದೋರ್ ಮೃಗಾಲಯದಿಂದ ಒಂದು ಗಂಡು ಮತ್ತು ಒಂದು ಹೆಣ್ಣು ಸಿಂಹ, ಒಂದು ಗಂಡು ಬೆಂಗಾಲ್ ಟೈಗರ್ ಬರಲಿದೆ.
ಅದಕ್ಕೆ ಪ್ರತಿಯಾಗಿ ತ್ಯಾವರೆಕೊಪ್ಪದಿಂದ ಸೆ.25ರಂದು ಔರಂಗಾಬಾದ್ಗೆ ಒಂದು ಗಂಡು ಮತ್ತು ಒಂದು ಹೆಣ್ಣು ಸಿಂಹ, ಒಂದು ಕರಡಿ, ಒಂದು ಗಂಡು ಮತ್ತು ಒಂದು ಹೆಣ್ಣು ನರಿಯನ್ನು ರವಾನಿಸಲಾಗುತ್ತಿದೆ.
ಇಂದೋರ್ ಮೃಗಾಲಯಕ್ಕೆ ಒಂದು ಕಾಡುಕೋಣ, ಎರಡು ಗಂಡು ಮತ್ತು ಎರಡು ಹೆಣ್ಣು ಆಸ್ಟ್ರಿಚ್ಗಳನ್ನು ರವಾನಿಸಲಾಗುತ್ತಿದೆ ಎಂದು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಿಇಒ ಅಮರಾಕ್ಷರ ತಿಳಿಸಿದ್ದಾರೆ.
