Trending

ಬೆಂಬಲಿಗರೇ ತಾಳ್ಮೆಯಿಂದ ಇರಿ, ಹಾವೇರಿಗೆ ನಾನೇ ಬಿಜೆಪಿ ಅಭ್ಯರ್ಥಿ ಆಗ್ತೀನಿ : ಕೆ.ಇ.ಕಾಂತೇಶ್‌ ವಿಶ್ವಾಸ

Spread the love

ಹಾವೇರಿ : ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ ಸಭೆ ಮುಗಿದ ಬಳಿಕ ಖಂಡಿತವಾಗಿ ಸಿಹಿ ಸುದ್ದಿ ಸಿಗಲಿದೆ. ಬೆಂಬಲಿಗರು ತಾಳ್ಮೆಯಿಂದ ಇರಬೇಕು. ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಆಗ್ತೀನಿ ಎನ್ನುವ ವಿಶ್ವಾಸ ಇದೆ ಎಂದು ಮಾಜಿ ಡಿಸಿಎಂ ಕೆಎಸ್‌ ಈಶ್ವರಪ್ಪ ಅವರ ಪುತ್ರ ಕೆಇ ಕಾಂತೇಶ್‌ ಹೇಳಿದ್ದಾರೆ. ಈ ಮೂಲಕ ಇತರೆ ಟಿಕೆಟ್‌ ಆಕಾಂಕ್ಷಿಗಳಿಗೆ ಟಾಂಗ್‌ ನೀಡಿದ್ದಾರೆ.

ಹಾವೇರಿಯ ಸಿಂಧಗಿ ಮಠದಲ್ಲಿ ಮಾತನಾಡಿದ ಅವರು, ಒಂದು ವೇಳೆ ಅಲ್ಲ, ನೂರಕ್ಕೆ ನೂರು ಟಿಕೆಟ್‌ ಸಿಗುವ ವಿಶ್ವಾಸ ಇದೆ. ಟಿಕೆಟ್‌ ಕೊಡೋದೆ ಇಲ್ಲ ಎಂಬ ಪ್ರಶ್ನೆಯೇ ಇಲ್ಲ. ನಮ್ಮಲ್ಲಿ ಯಾವ ಗೊಂದಲವೂ ಇಲ್ಲ, ಟಿಕೆಟ್ ಕೇಳೋದು ಎಲ್ಲರ ಹಕ್ಕು. ಹೈಕಮಾಂಡ್ ನಿಶ್ಚಯ ಮಾಡಿ ಯಾರಿಗೆ ಟಿಕೆಟ್ ಅನ್ನುತ್ತೋ ಅವರ ಪರ ಎಲ್ಲರೂ ಕೆಲಸ ಮಾಡುವುದು ಪದ್ಧತಿ. ಖಂಡಿತವಾಗಿ ನಾನು ಟಿಕೆಟ್ ನಿರೀಕ್ಷೆಯಲ್ಲಿದ್ದೇನೆ ಎಂದರು.

ಟಿಕೆಟ್‌ ಸಿಗದೇ ಹೋದರೆ ಎಂಬ ಪ್ರಶ್ನೆಯೇ ಇಲ್ಲ, ನೂರಕ್ಕೆ ನೂರು ಟಿಕೆಟ್‌ ಸಿಗುವ ವಿಶ್ವಾಸ ಇದೆ. ಯಾವುದೇ ಕಾರಣಕ್ಕೂ ನನಗೆ ಅನ್ಯಾಯ ಆಗಲ್ಲ. ಕೆಎಸ್‌ ಈಶ್ವರಪ್ಪ ಅವರು ಅಮಿತ್ ಶಾ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಅಮಿತ್ ಶಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಿಇಸಿ ಮೀಟಿಂಗ್ ಮುಗಿದ ಬಳಿಕ ಖಂಡಿತವಾಗಿ ಸಿಹಿ ಸುದ್ದಿ ಸಿಗುತ್ತೆ. ಬೆಂಬಲಿಗರು ತಾಳ್ಮೆಯಿಂದ ಇರಬೇಕು ಲೋಕಸಭಾ ಕ್ಯಾಂಡಿಡೇಟ್ ನಾನೇ ಆಗ್ತೀನಿ ಎನ್ನುವ ವಿಶ್ವಾಸ ಇದೆ ಎಂದು ಹೇಳಿದರು.

ಕೇವಲ ಹಾವೇರಿಯಲ್ಲಷ್ಟೇ ಈ ಪರಿಸ್ಥಿತಿ ಇಲ್ಲ. ಈ ಸಿಚುವೇಶನ್ ಎಲ್ಲಾ ಕ್ಷೇತ್ರಗಳಲ್ಲೂ ಇದೆ. ಬಸವರಾಜ ಬೊಮ್ಮಾಯಿ ಅವರ ಹೆಸರು ಫಿಕ್ಸ್ ಆದರೆ, ಬಿಸಿ ಪಾಟೀಲ್ ಹೆಸರು ಫಿಕ್ಸ್ ಆದರೂ ನಾವು ಓಡಾಡಿ ಕೆಲಸ ಮಾಡ್ತೀವಿ. ನಾನು ಸ್ಥಳೀಯನೇ ಇದ್ದೇನೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟರೂ ನಾನು ಕೆಲಸ ಮಾಡ್ತೀನಿ. ಶಿವಮೊಗ್ಗದಲ್ಲಿ ಸಕ್ರಿಯವಾಗಿ ಕೆಲಸ ಮಾಡಿ ಚನ್ನಬಸಪ್ಪ ಅವರನ್ನು ಗೆಲ್ಲಿಸಿದ್ದೇವೆ ಎಂದು ತಿಳಿಸಿದರು.

ನಾನೂ ಒಬ್ಬ ಸಾಮಾನ್ಯ ಕಾರ್ಯಕರ್ತ, ಯಾರಿಗೆ ಟಿಕೆಟ್‌ ಕೊಟ್ಟರೂ ಸಂತೋಷದಿಂದ ಕೆಲಸ ಮಾಡ್ತೀವಿ. ಬಿಜೆಪಿ ಈ ಮಟ್ಟಕ್ಕೆ ಬರೋದಕ್ಕೆ ಅನೇಕ ಹಿರಿಯರು ತಪಸ್ಸು ಮಾಡಿದ್ದಾರೆ. ಎಷ್ಟೋ ಜನ ಪ್ರಚಾರಕರು ದೇಶ, ಪಕ್ಷಕ್ಕಾಗಿ ಮನೆ ಬಿಟ್ಟು, ಮದುವೆ ಆಗದೇ ಕೆಲಸ ಮಾಡಿದ್ದಾರೆ. ಆದ್ದರಿಂದ ಮೋದಿಯವರನ್ನು ಪ್ರಧಾನಿ ಮಾಡಲು ಕೆಲಸ ಮಾಡ್ತೀವಿ ಎಂದರು.

[pj-news-ticker]