Trending

ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ ನೌಕರರ ಸಂಬಳ ಕಟ್, ರಜೆ ರದ್ದು, ಎಸ್ಮಾ ಜಾರಿ

Spread the love

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದಾರೆ. ಆದರೆ ಈ ಮುಷ್ಕರದಲ್ಲಿ ಎಲ್ಲಾ ಸಾರಿಗೆ ನೌಕರರೂ ಭಾಗವಹಿಸಿಲ್ಲ. ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿರುವ ನೌಕರರಿಗೆ ಸಾರಿಗೆ ಇಲಾಖೆ ಶಾಕ್ ನೀಡಿದ್ದು, ಅವರ ರಜೆ ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಮುಷ್ಕರದಲ್ಲಿ ಭಾಗಿಯಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಡ್ಯೂಟಿ ಮಾಡಿಲ್ಲ ಅಂದರೆ ಸಂಬಳ ನೀಡುವುದಿಲ್ಲ ಎಂದು ಇಲಾಖೆ ಎಚ್ಚರಿಕೆ ನೀಡಿದೆ.

ಸಾರಿಗೆ ನೌಕರರಿಗೆ ಯಾವುದೇ ರಜೆ ಮಂಜೂರು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಮುಷ್ಕರದಲ್ಲಿ ಭಾಗಿಯಾಗಲು ಬಹುಮಂದಿಗೆ ಆತಂಕ ಶುರುವಾಗಿದೆ. 2021ರ ಪ್ರತಿಭಟನೆಯ ವೇಳೆ ಆದಂತಹ ಅನುಭವದ ಆತಂಕ ಎದುರಾಗಿದ್ದು, ಎಸ್ಮಾ ಜಾರಿ, ಕೋರ್ಟ್ ಆದೇಶ ಮತ್ತು ಅಮಾನತಿನ ಆತಂಕ ಎದುರಾಗಿದೆ.

ಮತ್ತೆ ಸಸ್ಪೆಂಡ್ ಮಾಡಿದರೆ ವರ್ಷಗಳ ಕಾಲ ಕೆಲಸ ಇರುವುದಿಲ್ಲ. ಹೀಗಾಗಿ ಮುಷ್ಕರದಲ್ಲಿ ಭಾಗಿಯಾಗಲು ಹಲವರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಮತ್ತೊಂದು ಸಂಘಟನೆಯಿಂದ ಬೆಂಬಲವಿಲ್ಲ. ಇದರಿಂದ ನೌಕರರಲ್ಲೇ ಗೊಂದಲ ನಿರ್ಮಾಣ ಆಗುವ ಸಾಧ್ಯತೆ ಇದೆ.

[pj-news-ticker]