Trending

ಕ್ರಿಕೆಟ್ : ಹುಬ್ಬಳ್ಳಿಯ ಶ್ರೀನಾಥ ಕುಲಕರ್ಣಿ, ಶಿವಮೊಗ್ಗದ ಜೆ.ಸಂದೀಪ್ BCCI ಅಂಪೈರ್

Spread the love

ಬೆಂಗಳೂರು: ಹುಬ್ಬಳ್ಳಿಯ ಶ್ರೀನಾಥ ಕುಲಕರ್ಣಿ ಮತ್ತು ಶಿವಮೊಗ್ಗದ ಜೆ. ಸಂದೀಪ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂಪೈರ್ ಆಗಿ ಅರ್ಹತೆ ಗಳಿಸಿದ್ದಾರೆ.

ಈಚೆಗೆ ಅಹಮದಾಬಾದಿನಲ್ಲಿ ನಡೆದಿದ್ದ ಬಿಸಿಸಿಐ ಅಂಪೈರಿಂಗ್ ಪರೀಕ್ಷೆಯಲ್ಲಿ ಶ್ರೀನಾಥ ಮತ್ತು ಸಂದೀಪ್ ಅವರು ಉತ್ತೀರ್ಣರಾಗಿದ್ದಾರೆ.

ಈ ಪರೀಕ್ಷೆಯಲ್ಲಿ ಒಟ್ಟು 26 ಮಂದಿ ಪಾಸಾಗಿದ್ದಾರೆ. ಬಿಸಿಸಿಐ ಟೂರ್ನಿಗಳ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಅವರಿಗೆ ಲಭಿಸಲಿದೆ.

[pj-news-ticker]