ಬೆಂಗಳೂರು: ಹುಬ್ಬಳ್ಳಿಯ ಶ್ರೀನಾಥ ಕುಲಕರ್ಣಿ ಮತ್ತು ಶಿವಮೊಗ್ಗದ ಜೆ. ಸಂದೀಪ್ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂಪೈರ್ ಆಗಿ ಅರ್ಹತೆ ಗಳಿಸಿದ್ದಾರೆ.
ಈಚೆಗೆ ಅಹಮದಾಬಾದಿನಲ್ಲಿ ನಡೆದಿದ್ದ ಬಿಸಿಸಿಐ ಅಂಪೈರಿಂಗ್ ಪರೀಕ್ಷೆಯಲ್ಲಿ ಶ್ರೀನಾಥ ಮತ್ತು ಸಂದೀಪ್ ಅವರು ಉತ್ತೀರ್ಣರಾಗಿದ್ದಾರೆ.
ಈ ಪರೀಕ್ಷೆಯಲ್ಲಿ ಒಟ್ಟು 26 ಮಂದಿ ಪಾಸಾಗಿದ್ದಾರೆ. ಬಿಸಿಸಿಐ ಟೂರ್ನಿಗಳ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಅವರಿಗೆ ಲಭಿಸಲಿದೆ.
