Trending

ರೇಣುಕಾಸ್ವಾಮಿ ಕೊಲೆ ಪ್ರಕರಣ : ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ದರ್ಶನ್‌ ಕಾರು ಚಾಲಕ ಲಕ್ಷ್ಮಣ್‌

Spread the love

ಶಿವಮೊಗ್ಗ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ12 ಆರೋಪಿ, ದರ್ಶನ್‌ ಕಾರು ಚಾಲಕ ಲಕ್ಷ್ಮಣ್‌ ಜೈಲಿನಿಂದ ಬಿಡುಗಡೆಯಾಗಿದ್ದಾನೆ.

ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿ ಹೊರ ಬಂದ ಲಕ್ಷ್ಮಣ್‌ನನ್ನು  ಮಾಧ್ಯಮಗಳು ಮಾತನಾಡಿಸಲು ಪ್ರಯತ್ನಿಸಿದ್ದವು. ಈ ವೇಳೆ ಲಕ್ಷ್ಮಣ್‌ ಓಡೋಡಿ ರಸ್ತೆಯಲ್ಲಿ ನಿಂತಿದ್ದ ಇನ್ನೋವಾ ಕಾರನ್ನು ಹತ್ತಿ ಬೆಂಗಳೂರು ಕಡೆಗೆ ತೆರಳಿದ್ದಾನೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಶಿವಮೊಗ್ಗದ ಜೈಲಿನಲ್ಲಿರುವ ಎ ೧೨ ಆರೋಪಿ ಲಕ್ಷ್ಮಣ್‌ಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ೧೨ ಆಗಿದ್ದ ಲಕ್ಷ್ಮಣ್ ಮತ್ತು ಎ೬ ಜಗದೀಶ್ ಆಗಸ್ಟ್ ೨೮ ರಲ್ಲಿ ಶಿವಮೊಗ್ಗದ ಓತಿಘಟ್ಟದಲ್ಲಿರುವ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದರು. ರೌಡಿಶೀಟರ್ ನಾಗನ ಜೊತೆ ಆರೋಪಿ ನಟ ದರ್ಶನ್ ಕಾಣಿಸಿಕೊಂಡ ಪ್ರಕರಣದಲ್ಲಿ ಡಿ ಗ್ಯಾಂಗ್ ನ ೧೭ ಜನರನ್ನ ರಾಜ್ಯದ ಹಲವು ಜೈಲ್ ಗಳಿಗೆ ಶಿಫ್ಟ್ ಮಾಡಲಾಗಿತ್ತು

ನಟ ದರ್ಶನ್ ಅವರನ್ನ ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು. ಎ.೧೨ ಲಕ್ಷ್ಮಣ್ ಮತ್ತು ಎ೬ ಜಗದೀಶ್ ರನ್ನ ಶಿವಮೊಗ್ಗ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಇಂದು ಲಕ್ಷ್ಮಣ್ ಗೆ ಜಾಮೀನು ದೊರೆತಿದೆ. ಜಾಮೀನು ದೊರೆತ ಹಿನ್ನಲೆಯಲ್ಲಿ ಲಕ್ಷ್ಮಣ್ ಜಾಮೀನಿನ ಮೇಲೆ ಬಿಡುಗಡೆ ಆಗಿದೆ. ದರ್ಶನ್ ಅಭಿಮಾನಿ ಸಂಘದ ಚಿತ್ರದುರ್ಗದ ಜಗದೀಶ್ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆದುಕೊಂಡ ಆರೋಪದಲ್ಲಿ ಅಂದರ್ ಆಗಿದ್ದ.

[pj-news-ticker]