ಶಿವಮೊಗ್ಗ: ಬಿಜೆಪಿ, ಜೆಡಿಎಸ್ ಶಾಸಕರ ವಿರುದ್ಧದ ಹಗರಣದ ಸಂದರ್ಭದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೇಳಿದಾಗ ನೀಡಲಿಲ್ಲ. ಈಗ ಬಿಜೆಪಿ ಏಜೆಂಟ್ ರೀತಿಯಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಗೆ ಅನುಮತಿಸಿದ್ದಾರೆ. ಪಿಎಸ್ಐ ಹಗರಣದ ತನಿಖೆಯಾದ್ರೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಜೈಲಿಗೆ ಹೋಗ್ತಾರೆ. ಅದರಲ್ಲಿ ಎರಡು ಮಾತಿಲ್ಲ ಎಂಬುದಾಗಿ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಭವಿಷ್ಯ ನುಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಪಿಎಸ್ಐ ಹಗರಣದ ತನಿಖೆ ಮಾಡಿದ್ರೆ ವಿಜಯೇಂದ್ರ ಜೈಲಿಗೆ ಹೋಗ್ತಾರೆ. ವಿಜಯೇಂದ್ರ ನೀವು ಸಹ ಜೈಲಿಗೆ ಹೋಗ್ತೀರ. ನಿಮ್ಮ ಅಣ್ಣನೂ ಜೈಲಿಗೆ ಹೋಗ್ತಾರೆ ನೋಡ್ತಾ ಇರಿ ಎಂಬುದಾಗಿ ಹೇಳಿದರು.
ನಿಮ್ಮ ಹಗರಣವನ್ನು ತೆಗಿತೀವಿ. ನಿಮ್ಮ ಹಗರಣವನ್ನು ಬಿಡುವುದಿಲ್ಲ. ರಾಜ್ಯಪಾಲರ ಮನೆ ಮುತ್ತಿಗೆ ಹಾಕದೇ ಬಿಡುವುದಿಲ್ಲ ಎಂಬುದಾಗಿ ಶಿವಮೊಗ್ಗದಲ್ಲಿ ಶಾಸಕ ಬೇಳೂರು ಗೋಪಾಲ ಕೃಷ್ಣ ಅವರು ಗುಡುಗಿದರು.