ಸಾಗರ: ನಾಳೆ ಲಿಂಗನಮಕ್ಕಿ ಜಲಾಶಯಕ್ಕೆ ರೈತರಿಂದ ಮುತ್ತಿಗೆ ಮತ್ತು ಸಾಗರದಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ದಿನೇಶ್ ಶಿರವಾಳ ಹೇಳಿದರು
ಇಲ್ಲಿನ ಎ.ಸಿ .ಕಛೇರಿ ಎದುರು ನಡೆಯುತ್ತಿರುವ ರೈತ ಸಂಘದ ಬೃಹತ್ ಪ್ರತಿಭಟನೆಯಲ್ಲಿ ಪತ್ರಕರ್ತರ ಜೊತೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಸಂಘಟನೆ ಗಳ ಹೋರಾಟ ಪ್ರಾರಂಭವಾಗಿ ಇವತ್ತಿಗೆ ಮೂರನೆ ದಿನ ಆದರೆ ಶಿವಮೊಗ್ಗ ಜಿಲ್ಲೆಯ ಮಂತ್ರಿಗಳು ಹಾಗೂ ನಮ್ಮ ಕ್ಷೆತ್ರದ ಶಾಸಕರು ಸಹ ಭೇಟಿ ನೀಡಲಿಲ್ಲ ಮತ್ತು ಸರಕಾರದ ಮಟ್ಟದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದಿರುವುದು ದುರಾದೃಷ್ಟಕರ ಎಂದರು.
ಈ ಹಿನ್ನೆಲೆಯಲ್ಲಿ ನಾಳೆ ಸಾಗರದಿಂದ ಲಿಂಗನಮಕ್ಕಿ ಜಲಾಶಯದವರೆಗೆ ಪಾದಯಾತ್ರೆ ಮತ್ತು ಜಲಾಶಯಕ್ಕೆ ಮುತ್ತಿಗೆ ಹಾಕಲಾಗುವುದು ಹಾಗೂ ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ತಿ.ನಾ.ಶ್ರೀನಿವಾಸ್ ಮಾತನಾಡಿ, ಮಲೆನಾಡಿನ ಸಮಸ್ಯೆ ಗೊತ್ತಿಲ್ಲದವರು ಈ ರಾಜ್ಯದ ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಅವರಿಗೆ ರೈತರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡುತ್ತಾರೆ ಎಂದರೆ ಆಶ್ಚರ್ಯವಾಗುತ್ತದೆ. ರೈತರ ಸಮಸ್ಯೆ ಗೆ ಒಂದು ಶಾಶ್ವತ ಪರಿಹಾರ ಸಿಗಬೇಕು ಇಲ್ಲದಿದ್ದರೆ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.
ಗೋಷ್ಠಿ ಯಲ್ಲಿ ಶಿವನಾಂದ ಕುಗ್ವೆ,ದೂಗೂರು ಪರಮೇಶ್, ಎನ್.ಡಿ ವಸಂತ್ ಕುಮಾರ್,ರವಿಕುಗ್ವೆ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.
