Trending

ಭದ್ರಾವತಿ ನಗರ ಸೌಂದರ್ಯೀಕರಣಕ್ಕೆ ಕೋಟ್ಯಂತರ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

Spread the love

ಭದ್ರಾವತಿ: ನಗರವನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಕಾಮಗಾರಿಗಳನ್ನು ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಸ್ವಾತಂತ್ರ್ಯೋತ್ಸವದಂದು ಉದ್ಘಾಟಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿ ನಿರ್ಮಿಸಿರುವ ಇಂಡಿಯಾ ಗೇಟ್, ವೀರಯೋಧರ ಪ್ರತಿಮೆಗಳ ಕಲಾಕೃತಿಗಳು ಹಾಗೂ ಅಶೋಕ ಸ್ತಂಭ, ಹಾಲಪ್ಪ ವೃತ್ತದಲ್ಲಿನ ಸ್ಪೈರಲ್ ಮಾಡರ್ನ್ ಆರ್ಟ್ ಸ್ಟ್ರಕ್ಚರ್, ರೈಲ್ವೆ ನಿಲ್ದಾಣದ ಮುಂಭಾಗದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.

ನಗರಸಭೆ ವಾಣಿಜ್ಯ ಮಾರುಕಟ್ಟೆ ಬಳಿಯ ನವೀಕರಣಗೊಂಡ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿ ಹಾಗೂ ಪರ್ಗೋಲಾ, ಅಮರಶಿಲ್ಪಿ ಜಕಣಾಚಾರಿ ಸೇತುವೆಯಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಮತ್ತು ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಕಡದಕಟ್ಟೆವರೆಗೆ ನಿರ್ಮಿಸಿರುವ ನೂತನ ಡಿವೈಡರ್‌ಗಳು ಹಾಗೂ ಅಲಂಕೃತ ಬೀದಿ ದೀಪಗಳಿಗೂ ಚಾಲನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಬಷೀರ್ ಅಹಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರಿನಾರಾಯಣ, ಪೌರಾಯುಕ್ತ ಕೆ.ಎನ್. ಹೇಮಂತ್, ನಗರಸಭೆ ಸದಸ್ಯರು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಬಿ.ಎಸ್. ಗಣೇಶ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಮಹಿಳೆಯರು, ವಿದ್ಯಾರ್ಥಿಗಳು, ಮಾಜಿ ಸೈನಿಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

[pj-news-ticker]