Trending

ತೀರ್ಥಹಳ್ಳಿ : ಫಾರಂಹೌಸ್ ನಲ್ಲಿ ಕಳ್ಳತನ, 1 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ವಸ್ತುಗಳ ಸಮೇತ ಇಬ್ಬರ ಬಂಧನ

Spread the love

ತೀರ್ಥಹಳ್ಳಿ: ಫಾರಂಹೌಸ್ ವೊಂದರಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿದ ಆಗುಂಬೆ ಪೊಲೀಸರು 1 ಲಕ್ಷಕ್ಕೂ ಹೆಚ್ಚಿನ ಮಾಲಿನ ಸಮೇತ ಇಬ್ಬರನ್ನು ಬಂಧಿಸಿದ ಘಟನೆ ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಣ್ಣುವಳ್ಳಿ ಗ್ರಾಮದಲ್ಲಿ ಜೂ.5ರ ಶುಕ್ರವಾರ ನಡೆದಿದೆ.

ಭದ್ರಾವತಿ ತಾಲೂಕಿನ ಬಾಲರಾಜ್@ಕಿರಣ ಬಿನ್ ಜಾನ್ (34) ಹಾಗೂ ಹರ್ಷ ಬಿನ್ ಮಂಜ (20) ಬಂಧಿತ ಆರೋಪಿಗಳು.

ಜೂ.2 ರಂದು ಕಳ್ಳತನ ಪ್ರಕರಣವನ್ನು ಬೇಧಿಸಲು ಹೊರಟ ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಶಿವನಗೌಡ ಪಾಟೀಲ್ ನೇತೃತ್ವದ ತಂಡ 7 ಮೊಬೈಲ್ ಫೋನ್‌ಗಳು-ಅಂದಾಜು ಮೌಲ್ಯ 1,41,000/- ರೂ ಗಳು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್-ಅಂದಾಜು ಮೌಲ್ಯ 30,000/- ರೂ.ಗಳು ಸೇರಿ ಒಟ್ಟು 1 ಲಕ್ಷ 71 ಸಾವಿರ ರೂ. ಗಳ ಮೌಲ್ಯದ ಮಾಲು ಹಾಗೂ ಇಬ್ಬರನ್ನು ವಶಪಡಿಸಿಕೊಂಡಿದ್ದಾರೆ.

ಆಗುಂಬೆ ಪೊಲೀಸರ ಈ ಕಾರ್ಯಾಚರಣೆ ಬಗ್ಗೆ ಸಾರ್ವಜನಿಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.

[pj-news-ticker]