ಕೋಲ್ಕತ್ತಾ: ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಲ್ಮುರಿ ಕೊಟ್ಟ ವ್ಯಾಪಾರಿಗೆ ಬಳಿಕ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶದ ಸಂಖ್ಯೆಗಳಿಂದ ಬಾಂಬ್ ಮತ್ತು ಕೊಲೆ ಬೆದರಿಕೆಗಳು ಬರಲು ಪ್ರಾರಂಭವಾಗಿವೆ.
ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಪ್ರಚಾರಕ್ಕೆಂದು ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಬದಿಯ ಅಂಗಡಿಯೊಂದಕ್ಕೆ ತೆರಳಿ ಮಂಡಕ್ಕಿಯಿಂದ ಮಾಡಿದ್ದ ಜಲ್ಮುರಿಯನ್ನು ಸವಿದಿದ್ದರು. ಇದರ ಬಳಿಕ ಖ್ಯಾತಿ ಪಡೆದ ಜಲ್ಮುರಿ ಮಾರಾಟಗಾರ ಬಿಕ್ರಮ್ ಸೌ ಅವರಿಗೆ ಬೆದರಿಕೆಗಳು ಬರಲು ಪ್ರಾರಂಭವಾಗಿವೆ.
ಚುನಾವಣಾ ಪ್ರಚಾರದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಕ್ರಮ್ ಸೌ ಅವರ ಅಂಗಡಿಗೆ ಭೇಟಿ ನೀಡಿ 10 ರೂ. ಯ ಜಲ್ಮುರಿ ಖರೀದಿ ಮಾಡಿ ಸವಿದಿದ್ದರು. ಇದರ ಬಳಿಕ ಬಿಕ್ರಮ್ ಸೌ ಅವರಿಗೆ ಅಂತಾರಾಷ್ಟ್ರೀಯ ಮೂಲಗಳಿಂದ ಬಾಂಬ್ ಮತ್ತು ಕೊಲೆ ಬೆದರಿಕೆಗಳು ಬರಲಾರಂಭಿಸಿದೆ. ಈ ಕುರಿತು ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಅಂಗಡಿಗೆ ಬಂದು ರಾಜ್ಯದ ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದಾದ ಜಲ್ಮುರಿಯನ್ನು ಖರೀದಿಸಿದ್ದರು.
ಇದರಿಂದ ತಮಗೆ ರಾತ್ರೋರಾತ್ರಿ ಖ್ಯಾತಿ ಸಿಕ್ಕಿದೆ. ಇದರಿಂದ ನಾನು ಮತ್ತು ನನ್ನ ಕುಟುಂಬ ಸಾಕಷ್ಟು ತೊಂದರೆ ಅನುಭವಿಸುತ್ತಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಬಿಕ್ರಮ್ ಸೌ ಅವರ ಅಂಗಡಿಗೆ ಬಂದು ಹೋದ ಮೇಲೆ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಪ್ರಧಾನಿ ಮೋದಿ ಕೂಡ ಅವರ ಅಂಗಡಿಯಲ್ಲಿ ಜಲ್ಮುರಿ ಖರೀದಿ ಮಾಡಿ ಸವಿದ ಚಿತ್ರವನ್ನು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದು ಈಗ ಅವರು ಮತ್ತು ಅವರ ಕುಟುಂಬಕ್ಕೆ ದುಃಸ್ವಪ್ನವಾಗಿ ಮಾರ್ಪಟ್ಟಿದೆ.
