Trending

ಪಾಕಿಸ್ತಾನದಲ್ಲಿ ರೈಲು ನಿಲ್ದಾಣ ಸ್ಫೋಟ; 20 ಜನರ ಸಾವು, 30 ಮಂದಿ ಗಾಯ

Spread the love

ಪೇಶಾವರ: ಪಾಕಿಸ್ತಾನದ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಶನಿವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.

ಪ್ರಾಥಮಿಕ ವರದಿಗಳ ಪ್ರಕಾರ ರೈಲು ಪ್ಲಾಟ್‌ಫಾರ್ಮ್‌ಗೆ ಬರುವ ಮುನ್ನವೇ ರೈಲ್ವೆ ನಿಲ್ದಾಣದ ಬುಕಿಂಗ್ ಕಚೇರಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ಜಾಫರ್ ಎಕ್ಸ್‌ಪ್ರೆಸ್ ಬೆಳಗ್ಗೆ 9 ಗಂಟೆಗೆ ಪೇಶಾವರಕ್ಕೆ ಹೊರಡಬೇಕಿತ್ತು. ಸ್ಫೋಟ ಸಂಭವಿಸಿದಾಗ ರೈಲು ಇನ್ನೂ ಪ್ಲಾಟ್‌ಫಾರ್ಮ್‌ಗೆ ಬಂದಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಲ್ದಾಣದ ಸಾಮಾನ್ಯ ಜನಸಂದಣಿಯನ್ನು ಗಮನಿಸಿದರೆ, ಹೆಚ್ಚಿನ ಪ್ರಮಾಣದಲ್ಲಿ ಸಾವು-ನೋವು ಆಗಿರುವ ಅಪಾಯವಿದೆ ಎಂದು ವರದಿ ಹೇಳಿದೆ.

 

 

[pj-news-ticker]