Trending

ಖಾಸಗಿ ಬಸ್‌ಗಳ ಟಿಕೆಟ್‌ ದರ ಭಾರಿ ಹೆಚ್ಚಳ

Spread the love

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಕಚ್ಚಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಲಾಗಿದೆ.

ಇದರ ಬೆನ್ನಲ್ಲೇ ರಾಜ್ಯದ ಪ್ರಯಾಣಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್‌ ತಗುಲಿದ್ದು, ಖಾಸಗಿ ಬಸ್‌ ಟಿಕೆಟ್‌ ದರಗಳು  ಕೂಡ ದಿಢೀರ್‌ ಏರಿಕೆಯಾಗಿವೆ. ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿದೆ.

ಪೆಟ್ರೋಲ್​-ಡೀಸೆಲ್​, ಅಗತ್ಯ ವಸ್ತುಗಳು ಸೇರಿ ವಿವಿಧ ವಸ್ತುಗಳ ಬೆಲೆ ಗಗನಕ್ಕೇರಿವೆ. ಇದೀಗ ಬಸ್​ ಟಿಕೆಟ್​ ದರ ಕೂಡ ಹೆಚ್ಚಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಹೊರೆಯಾಗಿದೆ. ಲಕ್ಷಾಂತರ ನಗರ ನಿವಾಸಿಗಳು ದೂರದ ಊರುಗಳಿಗೆ ಹೋಗಲು ಖಾಸಗಿ ಬಸ್ ಮೊರೆ ಹೋಗುತ್ತಾರೆ. ಈ ಪ್ರಯಾಣಿಕರಿಗೆ ಇದೀಗ ಟಿಕೆಟ್ ಬೆಲೆ ಏರಿಕೆ ಬಿಸಿ ತಟ್ಟಲಿದೆ.

ಶೇ. 20 ರಿಂದ 30 ರಷ್ಟು ಹೆಚ್ಚಳ!

ಪೆಟ್ರೋಲ್-ಡೀಸೆಲ್​ ಬೆಲೆ 3 ರೂಪಾಯಿ ಏರಿಕೆಯಾಗುತ್ತಿದ್ದಂತೆ ಖಾಸಗಿ ಬಸ್​ ಮಾಲೀಕರು ಸಭೆ ನಡೆಸಿದ್ದು, ಟಿಕೆಟ್ ದರವನ್ನು ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಶೇ. 20 ರಿಂದ 30 ರಷ್ಟು ದರ ಏರಿಕೆಗೆ ಖಾಸಗಿ ಬಸ್ ಮಾಲೀಕರು ಮುಂದಾಗಿದ್ದು, ಟಿಕೆಟ್ ಭಾರೀ ಹೆಚ್ಚಳವಾಗಲಿದೆ.

[pj-news-ticker]