Trending

ಕಾಂಗ್ರೆಸ್​​ ಟಿಕೆಟ್​​ಗಾಗಿ ಹೆಚ್​​.ವೈ. ಮೇಟಿ ಮಕ್ಕಳ ನಡುವೆಯೇ ಪೈಪೋಟಿ

Spread the love

ಬಾಗಲಕೋಟೆ : ಹೆಚ್​.ವೈ.ಮೇಟಿ ನಿಧನದಿಂದ ತೆರವಾಗಿರುವ ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದೆ ಎಂದು ಆಯೋಗ ಘೋಷಿಸಿದ ಬೆನ್ನಲ್ಲೇ ಟಿಕೆಟ್​​ ಆಕಾಂಕ್ಷಿಗಳ ನಡುವಿನ ಪೈಪೋಟಿ ಜೋರಾಗಿದೆ.

ಕಾಂಗ್ರೆಸ್​​ ಮತ್ತು ಬಿಜೆಪಿ ಸೇರಿ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಟಿಕೆಟ್​​ಗಾಗಿ ಲಾಬಿಯೂ ಜೋರಾಗಿದೆ.

ಕಾಂಗ್ರೆಸ್​​ ಟಿಕೆಟ್​​ಗಾಗಿ ಮೇಟಿ ಮಗಳ ಪಟ್ಟು

ತಂದೆಯ ನಿಧನದ ಹಿನ್ನೆಲೆ ತೆರವಾಗಿರುವ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿರುವ ಕಾರಣ ಕಾಂಗ್ರೆಸ್​​ ಟಿಕೆಟ್​​ಗಾಗಿ ಹೆಚ್​. ವೈ. ಮೇಟಿ ಅವರ ಕಿರಿಯ ಮಗಳು ಮಹಾದೇವಿ ಮೇಟಿ ಪಟ್ಟು ಹಿಡಿದ್ದಾರೆ. ಈ ನಡುವೆ ಕುಟುಂಬದ ನಡುವೆಯೇ ನಡೆಯುತ್ತಿರುವ ಟಿಕೆಟ್ ಫೈಟ್ ವಿಚಾರವಾಗಿ ಮಾತುಕತೆಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಮೇಟಿ‌ ಮಕ್ಕಳನ್ನು ಕರೆದಿದ್ದಾರೆ.

ಮಲ್ಲಿಕಾರ್ಜುನ ಮೇಟಿ, ಬಾಯಕ್ಕ ಮೇಟಿ, ಉಮೇಶ್ ಮೇಟಿ ಸೇರಿದಂತೆ ಮಹಾದೇವಿ ಮೇಟಿ ಮುಖ್ಯಮಂತ್ರಿಗಳನ್ನು ನಾಳೆ ಭೇಟಿಯಾಗಲಿದ್ದಾರೆ ಎನ್ನಲಾಗಿದೆ. ಈ ನಡುವೆಯೂ ಪ್ರತಿಕ್ರಿಯಿಸಿರುವ ಮಹಾದೇವಿ ಮೇಟಿ, ನನಗೆ ಟಿಕೆಟ್​​ ಕೊಟ್ಟರೆ ಕಾಂಗ್ರೆಸ್​​ನಿಂದ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಬಂಡಾಯ ಸ್ಪರ್ಧೆ ಖಚಿತವಾಗಿದ್ದು, ಮಾರ್ಚ್​​ 20ರಂದು ನಾಮಪತ್ರ ಸಲ್ಲಿಸೋದಾಗಿ ಹೇಳಿದ್ದಾರೆ.

ಸಿಎಂ ಹಾಗೂ ಮೇಟಿ ಅವರ ಆಪ್ತ ಹೊಳೆಬಸು ಶೆಟ್ಟರ್ ಹೆಸರು ಹೇಳದೇ, ನಮ್ಮ ತಂದೆಯವರ ಆಪ್ತನಿಂದ ಕ್ಷೇತ್ರ ಹಾಳಾಗಿದೆ. ಆ ಆಪ್ತನನ್ನು ಮಟ್ಟ ಹಾಕಲು ನನ್ನಿಂದ ಸಾಧ್ಯ. ಆತ ನನ್ನ ಹೆಸರು ಕಡೆಗಣಿಸಿ ಮೇಟಿಯವರಿಗೆ ಮೂರು ಜನ ಮಕ್ಕಳು ಎಂದು ಸಿಎಂ ಸಿದ್ಧರಾಮಯ್ಯನವರಿಗೆ ಮಾಹಿತಿ ನೀಡಿದ್ದಾನೆ. ಕ್ಷೇತ್ರದಲ್ಲಿ ಆತನ ‌ಹಸ್ತಕ್ಷೇಪ ಅತಿಯಾಗಿದ್ದು, ಆ ಕಾರಣ ನಾನು ಅಖಾಡಕ್ಕೆ ಇಳಿಯುತ್ತಿದ್ದೇನೆ.

ಮೊನ್ನೆ ಸಿಎಂ ಮತ್ತು ಡಿಸಿಎಂ ಬಾಗಲಕೋಟೆಗೆ ಬಂದಾಗಲೂ ಅವರ ಜೊತೆ ಮಾತಾಡಿದ್ದೇನೆ. ನಾನು ಆಕಾಂಕ್ಷಿ ಎಂಬ ವಿಚಾರ ಅವರಿಗೆ ಅದಾಗಲೇ ತಿಳಿಸಿರೋದಾಗಿ ಮಹಾದೇವಿ ಮೇಟಿ ಹೇಳಿದ್ದಾರೆ.

[pj-news-ticker]