ಟೆಹರಾನ್ : ಇರಾನ್ ಮತ್ತೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದ್ದು, ಇದರ ಮೂಲಕ ಹಾದು ಹೋಗಲು ಯತ್ನಿಸಿದ ಭಾರತದ ಧ್ವಜ ಹೊತ್ತ 2 ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಇರಾನ್ ಮತ್ತು ಅಮೆರಿಕ ನಡುವಿನ ದ್ವಂದ್ವ ನಿಲುವಿನ ಮಧ್ಯೆ ಬೆಳವಣಿಗೆ ಸಂಭವಿಸಿದ್ದು, ಜಾಗತಿಕ ಇಂಧನ ಪೂರೈಕೆಯ ಮೇಲೆ ಮತ್ತೆ ಹೊಡೆತ ಬೀಳುವ ಆತಂಕ ಎದುರಾಗಿದೆ. ಸದ್ಯ ಕೇಂದ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಹೊರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ 2 ವಾಣಿಜ್ಯ ಹಡಗುಗಳ ಮೇಲೆ ಇರಾನ್ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ 2 ಗನ್ ಬೋಟ್ಗಳು ಗುಂಡು ಹಾರಿಸಿದವು ಎಂದು ಯುನೈಟೆಡ್ ಕಿಂಗ್ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಕೇಂದ್ರ ತಿಳಿಸಿದೆ. ಹಡಗು ಮತ್ತು ಅದರಲ್ಲಿನ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಹೇಳಿದೆ.
ಘಟನೆ ಬಳಿಕ ಸುಮಾರು 2 ಮಿಲಿಯನ್ ಬ್ಯಾರೆಲ್ಗಳಷ್ಟು ಇರಾಕ್ ತೈಲವನ್ನು ಸಾಗಿಸುತ್ತಿದ್ದ ಭಾರತೀಯ ಧ್ವಜ ಹೊತ್ತ ಅತಿ ದೊಡ್ಡ ಕಚ್ಚಾ ವಾಹಕವೂ ಸೇರಿ ಹಲವು ಹಡಗುಗಳು ಇದೀಗ ಯುಟರ್ನ್ ತೆಗೆದುಕೊಂಡಿವೆ ಎಂದು ಟ್ಯಾಂಕರ್ಟ್ರಾಕರ್ಸ್ ವರದಿ ಮಾಡಿದೆ. ಹಡಗುಗಳು ಜಲಸಂಧಿ ದಾಟಲು ಯತ್ನಿಸಿಸುತ್ತಿದ್ದಂತೆ ಐಆರ್ಜಿಸಿ ಗನ್ಬೋಟ್ಗಳು ಗುಂಡು ಹಾರಿಸಿದವು ಎಂದು ಮೂಲಗಳು ತಿಳಿಸಿವೆ.
