Trending

ಶಾಂತ ಸ್ವರದಲ್ಲಿ ಸಮಾಜ ಜಾಗೃತಿ : ಭದ್ರಾವತಿಯಲ್ಲಿ ಕತ್ತಲಹಾಡಿನ ಮಂತ್ರಮುಗ್ಧ ಕ್ಷಣಗಳು

Spread the love

ಭದ್ರಾವತಿ: ಗದ್ದಲವಿಲ್ಲದ ಸ್ವರ, ಅರ್ಥಪೂರ್ಣ ಪದಗಳು ಮತ್ತು ಜೀವನದ ಮೌಲ್ಯಗಳನ್ನು ಪ್ರತಿಬಿಂಬಿಸುವ ಕತ್ತಲಹಾಡುಗಳ ಮೂಲಕ ಭದ್ರಾವತಿಯಲ್ಲಿ ವಿಶಿಷ್ಟ ಸಂಗೀತ ಅನುಭವ ಮೂಡಿತು.

ನಗರದ ನಯನ ಆಸ್ಪತ್ರೆ ಸಭಾಂಗಣದಲ್ಲಿ ಜನ್ನಾಪುರ ಡಾ. ಬಿ.ಆರ್. ಅಂಬೇಡ್ಕರ್ ಜಾನಪದ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಸಹಯೋಗದಲ್ಲಿ ಆಯೋಜಿಸಿದ ಗಾಯನ ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ, ಸಮಾಜಕ್ಕೆ ದಾರಿದೀಪವಾಗುವ ಇಂತಹ ಕಲೆಗೆ ಹೆಚ್ಚಿನ ಉತ್ತೇಜನ ಅಗತ್ಯವಿದೆ ಎಂದು ಹೇಳಿದರು. ಇಂತಹ ಅಪರೂಪದ ಕಲೆಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲರದ್ದೂ ಆಗಿದೆ ಎಂದರು.

ಉದ್ಯಮಿ ಬಿ.ಕೆ. ಜಗನ್ನಾಥ್ ಮಾತನಾಡಿ, ಯಾವುದೇ ಆರ್ಭಟವಿಲ್ಲದೇ ಮನಸ್ಸಿಗೆ ಹತ್ತುವ ಈ ಹಾಡುಗಳು ವಿಭಿನ್ನ ಅನುಭವ ನೀಡುತ್ತವೆ. ಇವುಗಳನ್ನು ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಡಾ. ವೀಣಾ ಭಟ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಲಾವಿದರ ಪ್ರಯತ್ನವನ್ನು ಶ್ಲಾಘಿಸಿದರು. ತಮಟೆ ಜಗದೀಶ್ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಶಂಕರ್ ಬಾಬು ಪ್ರಾರ್ಥನೆ ಸಲ್ಲಿಸಿದರು. ಜಿ. ದಿವಾಕರ್ ಸ್ವಾಗತಿಸಿದರು. ಆಕಾಶವಾಣಿಯ ನಳಿನಕುಮಾರಿ ಕಾರ್ಯಕ್ರಮವನ್ನು ಸುಗಮವಾಗಿ ನಿರೂಪಿಸಿದರು.

ರಾಘವೇಂದ್ರ ಪ್ರಭು ಎಂ.ಯು ಅವರ ತಬಲಾ ವಾದನ ಗಾಯನಕ್ಕೆ ಸಾಥ್ ನೀಡಿತು. ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಕಲಾಸಕ್ತರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

[pj-news-ticker]