ಶಿವಮೊಗ್ಗ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಅಡುಗೆ ಅನಿಲವಷ್ಟೇ ಅಲ್ಲದೆ, ಆಟೋ ಅನಿಲಕ್ಕೂ ಸಮಸ್ಯೆ ಉಂಟಾಗಿದೆ. ಆಟೋ ಗ್ಯಾಸ್ ಪೊರೈಕೆಯಲ್ಲಿ ವತ್ಯಯದಿಂದಾಗಿ ಆಟೋ ಗ್ಯಾಸ್ ದರ ಕಳೆದ ನಾಲ್ಕು ದಿನಗಳಲ್ಲಿ 21 ರೂ. ದರ ಏರಿಕೆ ಆಗಿದೆ. ಕಳೆದ ನಾಲ್ಕು ದಿನಗಳ ಹಿಂದೆ ಪ್ರತಿ ಕೆಜಿ ಗ್ಯಾಸ್ಗೆ 61ರೂ. ಇತ್ತು. ಇಂದು ಪ್ರತಿ ಕೆಜಿ ಗ್ಯಾಸ್ಗೆ 82 ರೂ ಆಗಿದೆ. ಇದು ಆಟೋ ಚಾಲಕರಿಗೆ ಸಂಕಟವನ್ನು ತಂದಿದೆ.
ಆಟೋ ಗ್ಯಾಸ್ ದರ ಏರಿಕೆ ಆಗಿದೆ ಎಂದು ನಾವು ಪ್ರಯಾಣಿಕರಿಗೆ ಹೇಳಿದರೆ ಅವರು ಆಟೋವನ್ನು ಹತ್ತುವುದಿಲ್ಲ. ಅಲ್ಲದೇ ಆಟೋ ದರ ಏರಿಕೆ ಮಾಡಿದರೆ ಪ್ರಯಾಣಿಕರು ಪ್ರಶ್ನೆ ಮಾಡುತ್ತಾರೆ. ಇದರಿಂದ ನಾವು ದಿನವಿಡಿ ದುಡಿದ ಹಣ ಗ್ಯಾಸ್ಗೆ ಇಡಬೇಕಾದ ಅನಿವಾರ್ಯತೆಯಲ್ಲಿದ್ದೇವೆ. ಇದರಿಂದ ನಮಗೆ ಸುಗಮವಾಗಿ ಗ್ಯಾಸ್ ಲಭ್ಯವಾಗುವಂತೆ ಇಂಧನ ಸಚಿವರು ಏನಾದರೂ ಮಾಡಬೇಕೆಂದು ಆಟೋ ಚಾಲಕರು ವಿನಂತಿಸಿಕೊಂಡಿದ್ದಾರೆ.
ಚಾಲಕರ ಮಾತಿನಂತೆ,
-
ಗ್ಯಾಸ್ ದರ ಏರಿಕೆಯಿಂದ ದಿನಸಿ ಆದಾಯ ಕಡಿಮೆಯಾಗಿದೆ
-
ಪ್ರಯಾಣ ದರ ಹೆಚ್ಚಿಸುವ ಒತ್ತಡ ಹೆಚ್ಚಾಗಿದೆ
-
ಕೆಲವು ಆಟೋಗಳು ರಸ್ತೆಗಿಳಿಯದೆ ನಿಲ್ಲುವ ಪರಿಸ್ಥಿತಿ ಬಂದಿದೆ
ಇತ್ತೀಚೆಗೆ ಗ್ಯಾಸ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದ ದೇಶದ ಹಲವು ನಗರಗಳಲ್ಲಿ ಆಟೋ ಚಾಲಕರು ಸಂಕಷ್ಟ ಎದುರಿಸುತ್ತಿರುವುದಾಗಿ ವರದಿಗಳು ಸೂಚಿಸುತ್ತಿವೆ.
ಚಾಲಕರ ಬೇಡಿಕೆ:
ಸರ್ಕಾರ ತಕ್ಷಣ ಗ್ಯಾಸ್ ಸರಬರಾಜು ಸುಧಾರಿಸಿ ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.
