Trending

ಇಡ್ಲಿ-ವಡೆ ಜೊತೆಗೆ ಗ್ಯಾಸ್‌ ಶುಲ್ಕವನ್ನೂ ಸೇರಿಸಿದ ಹೊಟೆಲ್‌ಗಳು : ಬಿಲ್‌ ನೋಡಿದ ಗ್ರಾಹಕರು ಶಾಕ್

Spread the love

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ದೇಶಾದ್ಯಂತ ಅಡುಗೆ ಅನಿಲದ ಕೊರತೆ ಎದುರಾಗಿದೆ. ಈಗಾಗಲೇ ಹಲವು ಹೊಟೆಲ್‌ಗಳು ಬಂದ್‌ ಆಗಿದ್ದು, ಇನ್ನೂ ಕೆಲವು ಹೊಟೆಗಳು ತಮ್ಮ ಮೆನುವನ್ನು ಕಡಿತಗೊಳಿಸುತ್ತಿದೆ.

ಇದರ ಪರಿಣಾಮ ಗ್ರಾಹಕರಿಗೂ ತಟ್ಟುತ್ತಿದ್ದು, ರೆಸ್ಟೋರೆಂಟ್‌ವೊಂದರಲ್ಲಿ ಬ್ರೇಕ್‌ಫಾಸ್ಟ್‌ ಮಾಡಿದವರಿಗೆ ಗ್ಯಾಸ್‌ ಶುಲ್ಕ ಸೇರಿಸಿ ಬಿಲ್‌ ನೀಡಲಾಗಿದೆ. ಗ್ರಾಹಕರೊಬ್ಬರು ಬಿಲ್‌ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ಭಾರೀ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಬಿಲ್‌ ಹಂಚಿಕೊಂಡ ವ್ಯಕ್ತಿ ಇಡ್ಲಿ, ವಡೆಯನ್ನು ತೆಗೆದುಕೊಂಡಿದ್ದಾರೆ. ಬಿಲ್‌ನಲ್ಲಿ ಗ್ಯಾಸ್‌ ಶುಲ್ಕವನ್ನು ಸಹ ನಮೂದು ಮಾಡಲಾಗಿದೆ. ಈ ಬಿಲ್‌ ಚೆನ್ನೈನ ತಿರುವೆಂಕಡನಗರ್, ಎಂ.ಜಿ.ಆರ್. ಸಾಲೈ ಪೆರುಂಗುಡಿಯ “ಗ್ರೀರಾಸ್‌ ರೆಸ್ಟೋರೆಂಟ್‌”ಗೆ ಸೇರಿದ್ದಾಗಿದೆ. ಇದರಲ್ಲಿ ದಿನಾಂಕ 12/03/2026, ಸಮಯ 08:32 ಎಂದು ಇದೆ. Gas’ಗೆ 9.52 ರೂಪಾಯಿ ಶುಲ್ಕ ಸೇರಿಸಲಾಗಿದೆ. ರೆಸ್ಟೋರೆಂಟ್‌ಗಳು ತೆರಿಗೆಗಳಲ್ಲದೆ ತಮ್ಮ ಖರ್ಚುವೆಚ್ಚಗಳನ್ನು ತೋರಿಸಲು ಈ ರೀತಿ ವಿಭಿನ್ನ ಹೆಸರಿನಲ್ಲಿ ಶುಲ್ಕ ವಿಧಿಸುತ್ತವೆ.

ಕೆಲವು ಹೊಟೆಲ್‌ಗಳು ಈಗಾಗಲೇ ಆಹಾರದ ದರದಲ್ಲಿ ಏರಿಕೆ ಮಾಡಿದೆ. ಸರ್ಕಾರವು ಈ ಪೂರೈಕೆ ಕೊರತೆಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ. ಆದರೂ, ಹೋಟೆಲ್ ಮಾಲೀಕರು ಎಲ್‌ಪಿಜಿ ಲಭ್ಯತೆ ಸುಸ್ಥಿರವಾಗದಿದ್ದರೆ ಮುಂದಿನ ದಿನಗಳಲ್ಲಿ ಆಹಾರದ ದರಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಅಡುಗೆ ಅನಿಲ ಉತ್ಪಾದನೆಯಲ್ಲಿ ಶೇ.25 ರಷ್ಟು ಹೆಚ್ಚಳವಾಗಿದ್ದು, ಸಾರ್ವಜನಿಕರು ಅಥವಾ ಉದ್ಯಮಿಗಳು ಭಯಭೀತರಾಗಿ ಖರೀದಿಸುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

[pj-news-ticker]