Trending

ಭದ್ರಾವತಿ ಬಿಇಒ ಲಂಚ ಪ್ರಕರಣ : 4 ಲಕ್ಷ ಬೇಡಿಕೆ – 1 ಲಕ್ಷ ಸ್ವೀಕರಿಸುವಾಗ ಲೋಕಾಯುಕ್ತ ಟ್ರ್ಯಾಪ್

Spread the love

ಭದ್ರಾವತಿ : ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ನಾಗೇಂದ್ರಪ್ಪ ಎ.ಕೆ. ಅವರು ಶಿಕ್ಷಕರಿಗೆ ಸರ್ಕಾರಿ ಸವಲತ್ತುಗಳನ್ನು ಮಂಜೂರು ಮಾಡಲು 4 ಲಕ್ಷ ರೂ. ಲಂಚದ ಬೇಡಿಕೆ ಇಟ್ಟ ಪ್ರಕರಣದಲ್ಲಿ ಕರ್ನಾಟಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಏನು ನಡೆದಿದೆ?

ಲಿಂಗರಾಜು ಎಂಬ ಶಿಕ್ಷಕರು ಭದ್ರಾವತಿ ತಾಲ್ಲೂಕು ಬಿಇಒ ಕಚೇರಿಯಲ್ಲಿ ಕಚೇರಿ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, 2011ರಿಂದ 2023ರವರೆಗೆ ತಮ್ಮ ಇಲಾಖೆಯಿಂದ ಬರಬೇಕಾದ ವಾರ್ಷಿಕ ವೇತನ ಬಡ್ತಿಗಳು ಹಾಗೂ ಇತರೆ ಭತ್ಯೆಗಳನ್ನು ನೀಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಈ ಸಂಬಂಧ ಭದ್ರಾವತಿ ಬಿಇಒ ನಾಗೇಂದ್ರಪ್ಪ ಎ.ಕೆ. ಹಾಗೂ ಮಧ್ಯವರ್ತಿ (ಖಾಸಗಿ ವ್ಯಕ್ತಿ) ಮಂಜುನಾಥ ಅವರು ಸೇರಿಕೊಂಡು 4 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣ ದಾಖಲು

02-03-2026 ರಂದು ನೀಡಿದ ದೂರಿನ ಮೇರೆಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988 (ತಿದ್ದುಪಡಿ 2018)ರ ಕಲಂ 7(a) ಅಡಿ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರ್ಯಾಪ್ ಕಾರ್ಯಾಚರಣೆ

ಇಂದು ಸಂಜೆ 7:00 ಗಂಟೆ ಸುಮಾರಿಗೆ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿರುವ ಬಿಇಒ ಅವರ ಕೊಠಡಿಯಲ್ಲಿ, ಲಿಂಗರಾಜು ಅವರಿಂದ 1,00,000 ರೂ. ಲಂಚದ ಹಣವನ್ನು ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ನಾಗೇಂದ್ರಪ್ಪ ಎ.ಕೆ. ಹಾಗೂ ಮಧ್ಯವರ್ತಿ ಮಂಜುನಾಥರನ್ನು ವಶಕ್ಕೆ ಪಡೆದಿದ್ದಾರೆ. ಲಂಚದ ಹಣವನ್ನು ಜಪ್ತಿಪಡಿಸಲಾಗಿದೆ.

ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ರಾದ ವೀರಬಸಪ್ಪ ಎಲ್ ಕುಸಲಾಪುರ ರವರು ಕೈಗೊಂಡಿರುತ್ತಾರೆ. ಟ್ರ್ಯಾಪ್ ಕಾರ್ಯಾಚರಣೆಯನ್ನು ಎಮ್.ಎಸ್.ಕೌಲಾಪೂರೆ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ  ಬಿ.ಪಿ. ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರಾದ ಗುರುರಾಜ್.ಎನ್ ಮೈಲಾರ ಸಿಬ್ಬಂದಿಯವರಾದ ಯೋಗೇಶ್.ಜಿ.ಸಿ, ಸಿ.ಹೆಚ್.ಸಿ.

ಮಂಜುನಾಥ ಎಂ. (ಸಿ.ಹೆಚ್.ಸಿ), ಟೀಕಪ್ಪ (ಸಿ.ಹೆಚ್.ಸಿ), ಸುರೇಂದ್ರ ಹೆಚ್.ಜಿ. (ಸಿ.ಹೆಚ್.ಸಿ), ಪ್ರಶಾಂತ್ ಕುಮಾರ್ ಹೆಚ್. (ಸಿ.ಪಿ.ಸಿ), ಚನ್ನೇಶ (ಸಿ.ಪಿ.ಸಿ), ಅರುಣ್ ಕುಮಾರ್ ಯು.ಬಿ. (ಸಿ.ಪಿ.ಸಿ), ದೇವರಾಜ್ ವಿ. (ಸಿ.ಪಿ.ಸಿ), ಪ್ರಕಾಶ್ ಬಾರಿಮರದ (ಸಿ.ಪಿ.ಸಿ), ಆದರ್ಶ್ (ಸಿ.ಪಿ.ಸಿ), ಚಂದ್ರಿಬಾಯಿ ಎಸ್. (ಮಹಿಳಾ ಪಿ.ಸಿ), ಪ್ರದೀಪ್ (ಎ.ಹೆಚ್.ಸಿ), ಚೇತನ್ (ಎ.ಪಿ.ಸಿ), ತರುಣ್ ಕುಮಾರ್ (ಎ.ಪಿ.ಸಿ), ಆಂಜನೇಯ ಡಿ.ಹೆಚ್. (ಎ.ಪಿ.ಸಿ), ಆನಂದ್ (ಎ.ಪಿ.ಸಿ) ಹಾಗೂ ಗೋಪಿ (ಎ.ಪಿ.ಸಿ) ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

[pj-news-ticker]