ಭದ್ರಾವತಿ : ಇತ್ತೀಚೆಗೆ ನಡೆದ ಲೋಕಸೇವಾ ಆಯೋಗದ (UPSC) ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ(NDA) ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದ ಶ್ರೇಯಾ ಗೌಡ ಅವರ ನಿವಾಸಕ್ಕೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಗೌರವಿಸಿದರು.
ಭದ್ರಾವತಿಯ ತಿಮ್ಲಾಪುರ ಗ್ರಾಮದ ಮನೆಗೆ ಇಂದು ಭೇಟಿ ನೀಡಿದ ಸಂಸದರು, ಶ್ರೇಯಾಗೆ ಹಾರ, ಶಾಲು, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಶ್ರೇಯಾ ಅವರ ಕುಟುಂಬದೊಂದಿಗೆ ಕೆಲಕಾಲ ಮಾತುಕಥೆ ನಡೆಸಿದ ಬಿ.ವೈ.ರಾಘವೇಂದ್ರ, ಶ್ರೇಯಾಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದರು, ಭದ್ರಾವತಿಯ ಶ್ರೇಯಾ ಗೌಡ ಅವರು UPSC ಪರೀಕ್ಷೆಯಲ್ಲಿ ಅದರಲ್ಲೂ NDA ಪರೀಕ್ಷೆಯಲ್ಲಿ ಮಹಿಳಾ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಅವರ ತಂದೆ ವಿಐಎಸ್ಎಲ್ (ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ) ಉದ್ಯೋಗಿದ್ದರೆ, ತಾಯಿ ಓರ್ವ ಶಿಕ್ಷಕಿಯಾಗಿದ್ದಾರೆ. ಸಾಮಾನ್ಯ ಕುಟುಂಬಕ್ಕೆ ಸೇರಿದ ಶ್ರೇಯಾಳ ಸಾಧನೆ ಎಲ್ಲರಿಗೂ ಮಾದರಿ. ದೇಶಭಕ್ತರ ಪರವಾಗಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಶ್ರೇಯಾಳ ಸಾಧನೆಯನ್ನು ಕೊಂಡಾಡಿದರು.
