ಶಿವಮೊಗ್ಗ: ಬಿಹೆಚ್ ರಸ್ತೆಯಲ್ಲಿರುವ ಎಸ್‌ಎಎಸ್ ಕಲೆಕ್ಷನ್ ಮೊಬೈಲ್ ಶಾಪ್ ಗೆ ನುಗ್ಗಿ ಯುವಕನಿಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಶಹಬಾಜ್ (22 ವರ್ಷ), ಆಕಾಶ್ (20 ವರ್ಷ) ಮತ್ತು ದಾದಪೀರ್ ಬಂಧಿತ ಆರೋಪಿಗಳು.
ಘಟನೆಯಲ್ಲಿ ಗಾಯಗೊಂಡಿರುವ ಸೈಯದ್ ಬರ್ಕತ್ (32 ವರ್ಷ) ಮೊಬೈಲ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಪರಿಚಿತ ವ್ಯಕ್ತಿಗಳಿಂದ ಚಾಕು ಇರಿದಿದ್ದರು.
ಇರಿತಕ್ಕೆ ಬಳಸಿದ ಚಾಕುವನ್ನು ದಾದಾಪೀರ್ ಎಂಬ ವ್ಯಕ್ತಿ ಒದಗಿಸಿದ್ದಾನೆ ಎಂದು ಎಸ್ಪಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಘಟನೆಗೆ ಕಾರಣ ವೈಯಕ್ತಿಕ ವೈಷಮ್ಯವಾಗಿದ್ದು, ಆರೋಪಿಗಳು ಮತ್ತು ಗಾಯಾಳು ಪರಸ್ಪರ ಪರಿಚಿತರಾಗಿದ್ದಾರೆ. ಈ ಘಟನೆಯಲ್ಲಿ ಗಾಯಾಳುವಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಪ್ರಾಣಾಪಾಯವಿಲ್ಲ ಎಂದು ತಿಳಿದು ಬಂದಿದೆ.
