Trending

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : ಶಿವಮೊಗ್ಗದ ಪ್ರೊ.ರಾಜೇಂದ್ರ ಚೆನ್ನಿ ಸೇರಿದಂತೆ ಮೂವರಿಗೆ ಗೌರವ

Spread the love

ಬೆಂಗಳೂರು: ಪ್ರಸ್ತಕ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ಸ್ವಾತಂತ್ರ್ಯ ಹೋರಾಟಗಾರ ಕೋಣಂದೂರು ಲಿಂಗಪ್ಪ, ಬೆಂಗಳೂರಿನ ಪೌರ ಕಾರ್ಮಿಕರಾದ ಫಕೀರವ್ವ, ಬಹುಭಾಷಾ ನಟ ಪ್ರಕಾಶ್ ರಾಜ್, ನಿವೃತ್ತ ಐಐಎಸ್ ಅಧಿಕಾರಿ ಸಿದ್ದಯ್ಯ ಸೇರಿದಂತೆ 70 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ರಾಜ್ಯೋತ್ಸವ ಪ್ರಶಸ್ತಿ – 2025 ಪಡೆದವರ ಮಾಹಿತಿ

ಕ್ಷೇತ್ರ: ಸಾಹಿತ್ಯ (ಹೆಸರು ಹಾಗೂ ಜಿಲ್ಲೆ)

ಪ್ರೊ.ರಾಜೇಂದ್ರ ಚೆನ್ನಿ – ಶಿವಮೊಗ್ಗ

ತುಂಬಾಡಿ ರಾಮಯ್ಯ – ತುಮಕೂರು

ಪ್ರೊ.ಆರ್.ಸುನಂದಮ್ಮ – ಚಿಕ್ಕಬಳ್ಳಾಪುರ

ಡಾ.ಎಚ್.ಎಲ್.ಪುಷ್ಪ – ತುಮಕೂರು

ರಹಮತ್ ತರೀಕೆರೆ – ಚಿಕ್ಕಮಗಳೂರು

ಹ.ಮ.ಪೂಜಾರ – ವಿಜಯಪುರ

ಕ್ಷೇತ್ರ: ಜಾನಪದ (ಹೆಸರು ಹಾಗೂ ಜಿಲ್ಲೆ)

ಬಸಪ್ಪ ಭರಮಪ್ಪ ಚೌಡಿ – ಕೊಪ್ಪಳ

ಬಿ.ಟಾಕಪ್ಪ ಕಣ್ಣೂರು – ಶಿವಮೊಗ್ಗ

ಸನ್ನಿಂಗಪ್ಪ ಸತ್ತಪ್ಪ ಮುಶೆನ್ನಗೊಳ – ಬೆಳಗಾವಿ

ಹನುಮಂತಪ್ಪ ಮಾರಪ್ಪ, ಚೀಳಂಗಿ – ಚಿತ್ರದುರ್ಗ

ಎಂ.ತೋಪಣ್ಣ – ಕೋಲಾರ

ಸೋಮಣ್ಣ ದುಂಡಪ್ಪ ಧನಗೊಂಡ – ವಿಜಯಪುರ

ಶ್ರೀಮತಿ ಸಿಂಧು ಗುಜರನ್ – ದಕ್ಷಿಣ ಕನ್ನಡ

ಎಲ್.ಮಹದೇವಪ್ಪ ಉಡಿಗಾಲ – ಮೈಸೂರು

ಕ್ಷೇತ್ರ: ಸಂಗೀತ (ಹೆಸರು ಹಾಗೂ ಜಿಲ್ಲೆ)

ದೇವೆಂದ್ರಕುಮಾರ ಪತ್ತಾರ್ – ಕೊಪ್ಪಳ

ಮಡಿವಾಳಯ್ಯ, ಸಾಲಿ – ಬೀದರ್

ಕ್ಷೇತ್ರ: ನೃತ್ಯ

ಪ್ರೊ.ಕೆ.ರಾಮಮೂರ್ತಿ ರಾವ್ – ಮೈಸೂರು

ಕ್ಷೇತ್ರ: ಚಲನಚಿತ್ರ / ಕಿರುತೆರೆ

ಪ್ರಕಾಶ್ ರಾಜ್ – ದಕ್ಷಿಣ ಕನ್ನಡ

ಶ್ರೀಮತಿ ವಿಜಯಲಕ್ಷ್ಮೀ ಸಿಂಗ್ – ಕೊಡಗು

ಕ್ಷೇತ್ರ: ಆಡಳಿತ

ಹೆಚ್.ಸಿದ್ದಯ್ಯ ಭಾ.ಆ.ಸೇ., (ನಿ) – ಬೆಂಗಳೂರು ದಕ್ಷಿಣ(ರಾಮನಗರ)

ಕ್ಷೇತ್ರ: ವೈದ್ಯಕೀಯ

ಡಾ.ಆಲಮ್ಮ ಮಾರಣ್ಯ – ತುಮಕೂರು

ಡಾ.ಜಯರಂಗನಾಥ್ – ಬೆಂಗಳೂರು ಗ್ರಾಮಾಂತರ

ಕ್ಷೇತ್ರ: ಸಮಾಜಸೇವೆ

ಶ್ರೀಮತಿ ಸೂಲಗಿತ್ತಿ ಈರಮ್ಮ – ವಿಜಯನಗರ

ಶ್ರೀಮತಿ ಫಕ್ಕೀರಿ – ಬೆಂಗಳೂರು ಗ್ರಾಮಾಂತರ

ಶ್ರೀಮತಿ ಕೋರಿನ್ ಆಂಟೊನಿಯಟ್ ರಸ್ಕಿನಾ – ದಕ್ಷಿಣ ಕನ್ನಡ

ಡಾ.ಎನ್.ಸೀತಾರಾಮ ಶೆಟ್ಟಿ – ಉಡುಪಿ

ಕೋಣಂದೂರು ಲಿಂಗಪ್ಪ – ಶಿವಮೊಗ್ಗ

[pj-news-ticker]