ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಕಾಂತೇಶ್ ಗೆ ಟಿಕೆಟ್ ಸಿಗದಿದ್ದರೇ ಬಂಡಾಯ ಅಭ್ಯರ್ಥಿಯಾಗಲು ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಅಭಿಪ್ರಾಯ ಸಂಗ್ರಹಿಸಿ ಚುನಾವಣೆಯಲ್ಲಿ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಕಾಂತೇಶ್ ಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಕಳೆದ ಬಾರಿ ಮಗನಿಗೆ ವಿಧಾನಸಭೆ ಚುನಾವಣೆ ಟಿಕೆಟ್ ಕೇಳಿದ್ದೆ. ಆದರೆ ಅಂದು ಮುಂದೆ ಕಾಂತೇಶ್ ಗೆ ಭವಿಷ್ಯವಿದೆ ಎಂದಿದ್ರು. ನೀವು ದುಡುಕಬೇಡಿ ಭವಿಷ್ಯವಿದೆ ಎಂದಿದ್ದರು. ಈ ಬಾರಿ ಕಾಂತೇಶ್ ಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.
ಕಾಂತೇಶ್ ಗೆ ಟಿಕೆಟ್ ಮಿಸ್ ವದಂತಿ ಕುರಿತು ಪ್ರತಿಕ್ರಿಯಿಸಿದ ಕೆ.ಎಸ್ ಈಶ್ವರಪ್ಪ, ಪುತ್ರನಿಗೆ ಟಿಕೆಟ್ ಸಿಗದೇ ಇದ್ದಲ್ಲಿ ಶಿವಮೊಗ್ಗದಲ್ಲಿ ಬೆಂಬಲಿಗರು ಸಭೆ ಕರೆದಿದ್ದು, ಅಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ಮುಂದುವರೆಯುವೆ ಎಂದರು. ಪುತ್ರನಿಗೆ ಟಿಕೆಟ್ ಪಡೆಯುವುದರ ಹಿಂದೆ ಬರೀ ನನ್ನ ರಾಜಕೀಯ ಭವಿಷ್ಯ ಅಡಗಿಲ್ಲ. ಬದಲಿಗೆ ಬಿಜೆಪಿಯ ಭವಿಷ್ಯ ಅಡಗಿದೆ. ಪಕ್ಷ ಉಳಿಸುವ ನಿಟ್ಟಿನಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವ ಕೆಲಸವೂ ಇದರ ಹಿಂದೆ ಇದೆ . ಬಂಡಾಯ ಅಭ್ಯರ್ಥಿಯಾಗಲು ಬೆಂಬಲಿಗರ ಒತ್ತಾಯವಿದೆ. ಅಭಿಪ್ರಾಯ ಸಂಗ್ರಹಿಸಿ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುತ್ತೇನೆ. ಈ ಬಗ್ಗೆ ಬೆಂಬಲಿಗರ ಜೊತೆಗೂ ಸಭೆ ಮಾಡಲಿದ್ದೇನೆ ಎಂದರು.