ಶಿವಮೊಗ್ಗ: ತಾಯಿಯನ್ನು ಮೆಗ್ಗಾನ್ ಆಸ್ಪತೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದ ಯುವಕ ಆಸ್ಪತ್ರೆ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಸುರಹೊನ್ನೆಯ ಆಕಾಶ್(30) ಆತ್ಮಹತ್ಯೆಮಾಡಿಕೊಂಡ ಯುವಕ.
ಆಸ್ಪತ್ರೆಯ ಆವರಣದಲ್ಲಿರುವ ಮಾರ್ಗಸೂಚಿ ಬೋರ್ಡಿಗೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂರು ದಿನದಿಂದ ಆಸ್ಪತೆಯಲ್ಲಿ ತಾಯಿ ಜೊತೆ ಇದ್ದ ಯುವಕನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ದೊಡ್ಡ ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
