Trending

ಶಿವಮೊಗ್ಗದಲ್ಲಿ ಯಾವನಿಗೂ ಬಾಲ ಬಿಚ್ಚೋದಕ್ಕೆ ಬಿಡುವುದಿಲ್ಲ, ಕಾನೂನೇ ಗೆಲ್ಲಬೇಕು : ಸಚಿವ ಮಧು ಬಂಗಾರಪ್ಪ

Spread the love

ದಾವಣಗೆರೆ : ಶಿವಮೊಗ್ಗದಲ್ಲಿ ಯಾವನಿಗೂ ಬಾಲ ಬಿಚ್ಚೋದಕ್ಕೆ ಬಿಡುವುದಿಲ್ಲ, ಕಾನೂನೇ ಗೆಲ್ಲಬೇಕು, ನಮ್ಮ ದೇಶದಲ್ಲಿ ಕಾನೂನು ಗೆದ್ದಾಗ ಮಾತ್ರ ನಾವು – ನೀವು ಸುರಕ್ಷಿತವಾಗಿರುತ್ತೇವೆ ಎಂದು ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ವಿಚಾರವಾಗಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರು ಅದು ಏನು ಅಂತಾ ಮೊದಲು ಸರಿಯಾಗಿ ತಿಳಿದುಕೊಳ್ಳಿ, ಅದನ್ನು ಎಫ್​​ಎಸ್​​ಎಲ್​​ಗೆ ಕಳುಹಿಸಿದ್ದೇವೆ. ಅವರು ಹೇಳಿದ್ದು ವರ್ಡ್ಸ್ ಬೇರೆ ಇದೆ, ಅದು ಹಾಗೆ ಇಲ್ಲ. ಅವತ್ತು ತಕ್ಷಣವೇ ಎಫ್​ಎಸ್​ಎಲ್​​ಗೆ ಕಳುಹಿಸಿದ್ದೇನೆ. ಹಾಗೆನಾದರೂ ಒಂದು ವೇಳೆ ಹೇಳಿದ್ರೆ, ಅವರು ಯಾರೇ ಆಗಿದ್ದರು ಕಾನೂನು ಕ್ರಮ ಕೈಗೊಳ್ಳಿ ಎಂದು ಹೇಳಿದ್ದೇನೆ ಎಂದಿದ್ದಾರೆ.

ದೇವೇಗೌಡರು ಇದೇ ಹೇಳಿಕೆ ಕೊಟ್ಟಿದ್ದರು, ಬೇಡ ಅಂತ ಹೇಳೋದಿಲ್ಲ; ಭದ್ರಾವತಿ ಶಾಸಕ ಸಂಗಮೇಶ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದೇವೇಗೌಡರು ಇದೇ ಹೇಳಿಕೆ ಕೊಟ್ಟಿದ್ದರು, ಬೇಡ ಅಂತ ಹೇಳೋದಿಲ್ಲ, ಅವರಿಗೆ ಏನು ಬೇಕು ಅದನ್ನು ಮಾಡಿಕೊಳ್ಳಲಿ, ಮೋದಿ ಪ್ರಧಾನಿ ಆದರೆ ದೇಶ ಬಿಡುವುದಾಗಿ ಹೇಳಿದ್ದರು. ಈಗ ಒಬ್ಬರಿಗೊಬ್ಬರು ಕೈ ಹಾಕಿಕೊಂಡು ಓಡಾಡುತ್ತಾರೆ ಎಂದು ವ್ಯಂಗ್ಯವಾಡಿದರು.

[pj-news-ticker]