Trending

ರಿಪ್ಪನ್ ಪೇಟೆ : ಅಕ್ರಮ ನಾಡ ಬಂದೂಕಿನಿಂದ ಆಕಸ್ಮಿಕ ಗುಂಡು ಹಾರಿ ವ್ಯಕ್ತಿ ಸಾವು

Spread the love

ರಿಪ್ಪನ್ ಪೇಟೆ: ಅನಧಿಕೃತ ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೆ.12ರ ಶುಕ್ರವಾರ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿರಿಯೋಗಿ ಗ್ರಾಮದಲ್ಲಿ ನಡೆದಿದೆ.

ಕೋಡೂರು ಸಮೀಪದ ಹಿರಿಯೋಗಿ ಗ್ರಾಮದ ದೇವರಾಜ (47) ಮೃತಪಟ್ಟವರು ಎಂದು ಗುರುತಿಸಲಾಗಿದೆ.

ನಾಡ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ ದೇವರಾಜ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ವಿವರ: ಲೋಡ್ ಆಗಿದ್ದ ಅನಧಿಕೃತ ನಾಡ ಬಂದೂಕನ್ನು ಹಿಡಿದುಕೊಂಡು ಮನೆಯ ಮೆಟ್ಟಿಲು ಹತ್ತುವಾಗ ಟ್ರಿಗರ್ ಎಳೆಯಲ್ಪಟ್ಟು ಗುಂಡು ಹಣೆಗೆ ತಾಗಿ ತಕ್ಷಣ ದೇವರಾಜ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ದುರ್ಘಟನೆ ನಡೆದಾಗ ಪತ್ನಿ ಅಡುಗೆ ಮನೆಯಲ್ಲಿ ಕೆಲಸದಲ್ಲಿದ್ದು , ಮಕ್ಕಳು ಕೋಣೆಯಲ್ಲಿ ಓದುತ್ತಿದ್ದರು. ಮನೆ ಮುಂಭಾಗದಿಂದ ಏಕಾಏಕಿ ಗುಂಡಿನ ಸದ್ದು ಕೇಳಿ ಕೂಡಲೇ ಹೊರಬಂದ ಕುಟುಂಬಸ್ಥರು ರಕ್ತಸಿಕ್ತ ಸ್ಥಿತಿಯಲ್ಲಿ ದೇವರಾಜ್ ಬಿದ್ದಿರುವುದನ್ನು ಕಂಡಿದ್ದಾರೆ. ತಲೆಗೆ ಗುಂಡು ತಗುಲಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಅವರ ಪಕ್ಕದಲ್ಲಿಯೇ ಅಕ್ರಮ ನಾಡ ಬಂದೂಕು ಸಹ ಇತ್ತು ಎನ್ನಲಾಗಿದೆ

[pj-news-ticker]