Breaking
Mon. Jun 17th, 2024

ಭದ್ರಾವತಿಯ ಹಿರಿಯ ಪತ್ರಕರ್ತ ಎನ್.ಬಾಬು ಅವರಿಗೆ ಕೆಯುಡಬ್ಲ್ಯೂಜೆ ಮಿಂಚು ಶ್ರೀನಿವಾಸ್ ಪ್ರಶಸ್ತಿ : ಅಭಿನಂದನೆ 

By Mooka Nayaka News Mar 28, 2024
Spread the love

ಶಿವಮೊಗ್ಗ:- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಪ್ರಕಟವಾಗಿದ್ದು, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹಿರಿಯ ಪತ್ರಕರ್ತರಾದ ಎನ್. ಬಾಬು ಇವರಿಗೆ ಮಿಂಚು ಶ್ರೀನಿವಾಸ್ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯು ೫ ಸಾವಿರರೂ. ನಗದು, ಪ್ರಶಸ್ತಿ ಪಲಕ ಹಾಗೂ ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ.

ಅಭಿನಂದನೆಗಳು:

ಮಿಂಚು ಶ್ರೀನಿವಾಸ್ ಪ್ರಶಸ್ತಿಗೆ ಆಯ್ಕೆಯಾದ ಎನ್. ಬಾಬು ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ.ವಿ. ಶಿವಕುಮಾರ್, ಪ್ರದಾನ ಕಾರ್ಯದರ್ಶಿ ವಿ.ಟಿ. ಅರುಣ್ ಹಾಗೂ ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್ ಇವರು ಅಭಿನಂದಿಸಿದ್ದಾರೆ.

Related Post