Trending

ಶಿವಮೊಗ್ಗ: ತಡರಾತ್ರಿವರೆಗೂ ಮೆರವಣಿಗೆ : ನಸುಕಿನ ಜಾವ ಹಿಂದೂ ಮಹಾಸಭಾ ಗಣಪನ ವಿಸರ್ಜನೆ

Spread the love

ಶಿವಮೊಗ್ಗ: ಇಲ್ಲಿನ ಹಿಂದೂ ಸಂಘಟನಾ ಮಹಾಮಂಡಳಿಯ (ಹಿಂದೂ ಮಹಾಸಭಾ) ಗಣೇಶನ ವಿಸರ್ಜನೆ ಭಾನುವಾರ ಬೆಳಗಿನ ಜಾವ 3.50ಕ್ಕೆ ತುಂಗಾ ನದಿಯ ಭೀಮನ ಮಡುವಿನಲ್ಲಿ ನೆರವೇರಿತು.

ಶನಿವಾರ ಬೆಳಿಗ್ಗೆ 11 ಗಂಟೆಗೆ ಕೋಟೆ ಭೀಮೇಶ್ವರನ ಗುಡಿಯಿಂದ ಗಣೇಶನ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಆರಂಭವಾಗಿತ್ತು.

ತಡರಾತ್ರಿವರೆಗೂ ಶಿವಮೊಗ್ಗ ನಗರದಲ್ಲಿ ಮೆರವಣಿಗೆ ಸಾಗಿದ್ದು, ನಸುಕಿನಲ್ಲಿ ಸುರಿವ ಮಳೆಯ ನಡುವೆ ಗಣೇಶನ ವಿಸರ್ಜನೆ ಮಾಡಲಾಯಿತು.

ಈ ವೇಳೆ ಶಿವಮೊಗ್ಗ ಶಾಸಕ ಎಸ್. ಎನ್. ಚನ್ನಬಸಪ್ಪ ಹಾಗೂ ಹಿಂದೂ ಸಂಘಟನಾ ಮಹಾಮಂಡಳಿಯ ಮಂಡಳಿಯ ಪ್ರಮುಖರು ಹಾಜರಿದ್ದರು.

[pj-news-ticker]