Trending

ಶಿವಮೊಗ್ಗ : ಕೇವಲ ಟಿವಿ ರಿಮೋಟ್ ಗಾಗಿ ‘ಇಲಿ ಪಾಷಾಣ’ ಸೇವಿಸಿ ಬಾಲಕಿ ಆತ್ಮಹತ್ಯೆ

Spread the love

ಶಿವಮೊಗ್ಗ : ಟಿವಿ ರಿಮೋರ್ಟ್ ಕೊಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿ ಬೈದಿದ್ದರಿಂದ ಮನನೊಂದು ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ನಗರದ ಸೂಳೆಬೈಲಿನಲ್ಲಿ ನಡೆದಿದೆ.

ಅಜ್ಜಿ ಬೈದಿದ್ದಕ್ಕೆ ಮನನೊಂದು ಸಹನಾ(16) ಆತ್ಮಹತ್ಯೆಗೆ ಶರಣಾದ ಬಾಲಕಿ. ಮೊದಲು ಟಿವಿ ರಿಮೋರ್ಟ್ಗಾಗಿ ಇಬ್ಬರು ಮಕ್ಕಳಿಂದ ಗಲಾಟೆ ಶುರುವಾಗಿದೆ. ಇದರಿಂದ ಅಜ್ಜಿ ಬಂದು ಮೊಮ್ಮಗಳಿಗೆ ಬೈದಿದ್ದಾರೆ. ಇದರಿಂದ ಮನನೊಂದ ಮೊಮ್ಮಗಳು ಸಹನಾ ಇಲಿ ಪಾಷಾಣ ಸೇವಿಸಿ ಪ್ರಾಣ ಬಿಟ್ಟಿದ್ದಾಳೆ.

ಭದ್ರಾವತಿ ತಾಲೂಕಿನ ಕಲ್ಲಿಹಾಳ್ ನಿವಾಸಿಯಾದ ಮೃತ ಬಾಲಕಿ ಸಹನಾ, ಅಜ್ಜಿ ಮನೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[pj-news-ticker]