Trending

ಸಮೀರ್‌ನನ್ನು ಒದ್ದು ಒಳಗೆ ಹಾಕಿ : ಬಿ.ವೈ.ವಿಜಯೇಂದ್ರ

Spread the love

ಶಿವಮೊಗ್ಗ: ಧರ್ಮಸ್ಥಳದ ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರಬೇಡಿ. ನಿಮಗೆ ಪ್ರಾಮಾಣಿಕತೆ ಇದ್ದರೆ ಸಮೀರ್‌ನನ್ನು ಮೊದಲು ಒದ್ದು ಒಳಗೆ ಹಾಕಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮೀರ್‌ ಜಾಮೀನು ರದ್ದು ಮಾಡಲು ಸರಕಾರ ಯಾಕೆ ಮೀನಮೇಷ ಎಣಿಸುತ್ತಿದೆ? ಧರ್ಮಸ್ಥಳವು ಮಂಜುನಾಥ ಸ್ವಾಮಿಯ ದೊಡ್ಡ ಪುಣ್ಯ ಕ್ಷೇತ್ರವಾಗಿದ್ದು, ಇದರ ಬಗ್ಗೆ ಯಾರೂ ಅಪಪ್ರಚಾರ ಮಾಡಬಾರದು. ಧರ್ಮಸ್ಥಳ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿಲ್ಲ. ಸೋನಿಯಾ ಗಾಂಧಿ ಬಗ್ಗೆ ಒಂದು ಪೋಸ್ಟ್‌ ಹಾಕಿದ್ರೆ ಬಂಧಿಸುವ ಪೊಲೀಸರು ಸಮೀರ್‌ನನ್ನು ಯಾಕೆ ಸುಮ್ಮನೆ ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ಅಧ್ಯಕ್ಷನಾಗಿ ಹೋಗಿದ್ದಲ್ಲ
ಬಿಜೆಪಿಯವರು ವೀರೇಂದ್ರ ಹೆಗ್ಗಡೆ ಪರವಾಗಿದ್ದಾರಾ ಅಥವಾ ಸೌಜನ್ಯಾ ಪರವಾಗಿದ್ದಾರಾ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ನಾನು ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ಅಥವಾ ಬಿಜೆಪಿ ಕಾರ್ಯಕರ್ತನಾಗಿ ಅಲ್ಲಿಗೆ ಹೋಗಿಲ್ಲ. ಧರ್ಮಸ್ಥಳದ ಭಕ್ತರ ಪರವಾಗಿ ಪಕ್ಷಾತೀತವಾಗಿ ಅಲ್ಲಿಗೆ ಹೋಗಿದ್ದೇನೆ. ಸೌಜನ್ಯಾ ತಾಯಿಯನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಹೋಗುವುದಾದರೆ ಅದರ ವೆಚ್ಚವನ್ನ ಭರಿಸುವುದಾಗಿ ಹೇಳಿದ್ದೇನೆ ಎಂದರು.

[pj-news-ticker]