Trending

ಭದ್ರಾವತಿ: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿ – ತಪ್ಪಿದ ಭಾರೀ ಅನಾಹುತ

Spread the love

ಭದ್ರಾವತಿ: ಅವೈಜ್ಞಾನಿಕ ಹಂಪ್ಸ್‌ಗಳಿಂದ ನಿಯಂತ್ರಣ ತಪ್ಪಿದ್ದ ಕಬ್ಬಿಣದ ಸರಳು ತುಂಬಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದು ಭಾರೀ ಅನಾಹುತವೊಂದು ಅದೃಷ್ಟಾವಶಾತ್ ತಪ್ಪಿದೆ.

ಭದ್ರಾವತಿಯ ಉಜ್ಜನೀಪುರ ಸರ್ಕಲ್‌ನಲ್ಲಿ ರವಿವಾರ ಸಂಜೆ 6.30ರ ಸಮಯದಲ್ಲಿ ತರೀಕೆರೆಯತ್ತ ಹೊರಟಿದ್ದ ಲಾರಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇಲ್ಲಿ ಅಪಘಾತ ತಪ್ಪಿಸುವ ಸಲುವಾಗಿ ಈ ಹಿಂದೆ ಅವೈಜ್ಞಾನಿಕವಾಗಿ ಹಂಪ್ಸ್‌ಗಳನ್ನು ಹಾಕಲಾಗಿದೆ. ಈ ಹಂಪ್ಸ್ ದಾಟು ಹೋಗುವುದೆ ದೊಡ್ಡ ಯಮಯಾತನೆ. ಈ ಹಂಪ್ಸ್ ಕಂಡು ಹಿಡಿಶಾಪ ಹಾಕದೇ ಇರುವ ವಾಹನ ಸವಾರರೇ ಇಲ್ಲ ಎನ್ನಬಹುದು.

ತುಮಕೂರು – ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿದ್ದು ಈ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಕಾಮಗಾರಿ ಮಾಡಿಲ್ಲ. ಇಲ್ಲಿ ಆಗಾಗ್ಗೆ ಟ್ರಾಫಿಕ್ ದಂಡ ವಸೂಲಿ ಸಹ ಮಾಡುತ್ತಿದ್ದು ಪೊಲೀಸರು ಹಂಪ್ಸ್ಗೆ ಬಗ್ಗೆ ಗಮನಕೊಡಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಭದ್ರಾವತಿ ಪೇಪರ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

[pj-news-ticker]