Trending

ಕೊಲ್ಲೂರಿನಿಂದ ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್ ಪಲ್ಟಿ

Spread the love

ಶಿವಮೊಗ್ಗ: ಕೊಲ್ಲೂರಿನಿಂದ ಕೊಡಚಾದ್ರಿಗೆ ಹೋಗುತ್ತಿದ್ದ ಜೀಪ್ ಪಲ್ಟಿಯಾದ ಘಟನೆ ರವಿವಾರ (ಆ.10) ನಡೆದಿದೆ. ಜೀಪ್‌ ನಲ್ಲಿ ಕೇರಳ ಮೂಲದ ಭಕ್ತರಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ಭಕ್ತರು ಕೊಲ್ಲೂರಿನಿಂದ ಜೀಪ್ ನಲ್ಲಿ ಹೊರಟಿದ್ದರು.

ಚಾಲಕನ ಅತಿ ವೇಗದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಜೀಪ್ ನಿಟ್ಟೂರು – ಕಟ್ಟಿನಹೊಳೆ ಮಾರ್ಗದ ಕುಂಬಳೆ ಗ್ರಾಮದ ಬಳಿ ಪಲ್ಟಿಯಾಗಿದೆ. ಜೀಪ್ ನಲ್ಲಿ ಕೇರಳ ಮೂಲದ 8 ಜನ ಭಕ್ತರಿದ್ದರು.

ಪಲ್ಟಿಯಾದ ಜೀಪ್ ಭಾಗಶಃ ಜಖಂ ಆಗಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡಿದಿದೆ.

[pj-news-ticker]