ಆನಂದಪುರ: ಸಮೀಪದ ಬೈರಾಪುರ ಪೀರನ ಕಣಿವೆಯ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
ಸಾಗರದಿಂದ ಆನಂದಪುರ ಮಾರ್ಗವಾಗಿ ಹಿರೇಕೆರೂರುಗೆ ಹೋಗುತ್ತಿರುವಾಗ ಈ ಘಟನೆ ನಡೆದಿದೆ. ಹಿರೇಕೆರೂರು ತಾಲೂಕಿನ ಹೋಲಂಬಿ ಗೂಂಡಾ ಗ್ರಾಮದ ನಿವಾಸಿಗಳಾದ ಮಂಜು, ಶ್ವೇತಾ ಮತ್ತು ರುದ್ರೇಶ್ ಗಾಯಗೊಂಡಿದ್ದಾರೆ.
ಮಗಳನ್ನು ನವೋದಯ ಶಾಲೆಗೆ ಸೇರಿಸುವ ಉದ್ದೇಶದಿಂದ ಸಾಗರಕ್ಕೆ ತೆರಳಿದ್ದು ಅಲ್ಲಿಂದ ಮರಳಿ ಊರಿಗೆ ಹೋಗುವಾಗ ಆನಂದಪುರ ಸಮೀಪ ಬೈರಾಪುರದ ಪೀರನ ಕಣಿವೆ ಬಳಿ ಅಪಘಾತ ನಡೆದಿರುವ ಬಗ್ಗೆ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಮಾನವೀಯತೆ ಮೆರೆದ ಪಿಎಸ್ಐ ಪ್ರವೀಣ್:
ಅಪಘಾತವಾದ ವಿಷಯ ತಿಳಿಯುತ್ತಿದ್ದಂತೆ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಸ್ಥಳಕ್ಕೆ ಭೇಟಿ ನೀಡಿ ಗಾಯಗೊಂಡವರನ್ನು ಕರೆದೊಯ್ಯಲು ಬೇರೆ ವಾಹನದ ವ್ಯವಸ್ಥೆ ಇಲ್ಲದ ಕಾರಣ ಪೋಲಿಸ್ ವಾಹನದಲ್ಲೇ ಗಾಯಾಳುಗಳನ್ನು ಆನಂದಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದು ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.
ಪೊಲೀಸ್ ಸಿಬ್ಬಂದಿಗಳಾದ ನಿರಂಜನ್ ಮತ್ತು ಸತೀಶ್ ಗಾಯಾಳುಗಳನ್ನು ಕರೆತರುವುದರಲ್ಲಿ ಸಹಕರಿಸಿದರು.
