Breaking
Mon. Oct 14th, 2024

ಸೋಮಶೇಖರ್-ಹೆಬ್ಬಾರ್ ಗೆ ಎಷ್ಟು ಹಣ ಕೊಟ್ರಿ: ಸಿಎಂಗೆ ಈಶ್ವರಪ್ಪ ಪ್ರಶ್ನೆ

By Mooka Nayaka News Mar 2, 2024
Spread the love

ಮೈಸೂರು: ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ಬಗ್ಗೆ ಹೇಳಿರುವ ಸಿಎಂ ಸಿದ್ದರಾಮಯ್ಯ ಅವರು ಆಫರ್ ಕೊಟ್ಟಿದ್ದು ಯಾರು ಎಂದು ಹೇಳಲಿ. 50 ಕೋಟಿ ಆಫರ್ ಕೊಟ್ಟವರನ್ನು ಮೊದಲು ಜೈಲಿಗೆ ಕಲುಹಿಸಲಿ. ಇಲ್ಲದಿದ್ದರೆ ಯಾವು ರಾಜಕೀಯಕ್ಕಾಗಿ ಸುಳ್ಳು ಹೇಳಿದ್ದೇನೆ ಎಂದು ಜನರ ಕ್ಷಮೆ ಕೇಳಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿಎಂ ಬಾಯಲಿ ಈ ರೀತಿಯ ಮಾತು ಬರಬಾರದು. ಮಾತು ಬಂದ ಮೇಲೆ ಅದಕ್ಕೆ ಸಾಕ್ಷಿ ಕೊಡಬೇಕು. ಗುಪ್ತಚರ ಇಲಾಖೆಯ ಅವರ ಕೈಯಲ್ಲೇ ಇದೆ. ನಿಮ್ಮ ಶಾಸಕರಿಗೆ ಆಫರ್ ಕೊಟ್ಟಿದ್ದು ಯಾರೆಂದು ಜನರ ಮುಂದೆ ನೇರವಾಗಿ ಹೇಳಿ. ವೂಟ್ ಹಾಕಿಸಿಕೊಳ್ಳಲು ಎಸ್.ಟಿ ಸೋಮಶೇಖರ್ ಗೆ ಎಷ್ಟು ನೂರು ಕೋಟಿ ಕೊಟ್ಟಿದ್ದಿರಿ? ಶಿವರಾಂ ಹೆಬ್ಬಾರ್ ವೋಟ್ ಹಾಕದಂತೆ ತಡೆಯಲು ಎಷ್ಟು ಹಣ ಕೊಟ್ಟಿದ್ರಿ. ಮೊದಲು ಅದನ್ನು ಹೇಳಿ ಎಂದು ಆಗ್ರಹಿಸಿದರು.

ಡಿಕೆಶಿ ಉಗ್ರರ ಪರ: ಮೊದಲು ಡಿ.ಕೆ ಶಿವಕುಮಾರ್ ಬಾಯಿಗೆ ಬೀಗ ಹಾಕಿ. ಡಿ.ಕೆ‌ ಶಿವಕುಮಾರ್ ಬಾಯಿಗೆ ಬಂದಂತೆ ಹೇಳಿಕೆ‌ ಕೊಡುತ್ತಿದ್ದಾರೆ. ಮೊದಲು ಅದನೆಲ್ಲಾ ನಿಲ್ಲಿಸಿ. ಡಿ.ಕೆ ಭಯೋತ್ಪಾದಕರ ಪರ ಎಂಬುದು ನಮಗೆ ಗೊತ್ತಾಗಿದೆ. ಅವರ ಮೇಲೆ ನಮಗೆ ಯಾವ ನಂಬಿಕೆಗಳು ಉಳಿದಿಲ್ಲ. ಅವರು ಹೇಳಿದನ್ನು ಜನ ಕೇಳಬೇಕು ಅಂಥ ಏನು ಇಲ್ಲ ಎಂದರು.ಬಾಂಬ್ ಸ್ಪೋಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಇದು ಭಯೋತ್ಪಾದಕರ ಕೃತ್ಯವಲ್ಲದೆ ಮತ್ತೇನು? ಹೋಟೆಲ್ ನಲ್ಲಿ ಯಾರೋ ಮಕ್ಕಳು ಪಟಾಕಿ ಹೊಡೆದಿದ್ದಾರಾ? ಅಥವಾ ಬಲೂನ್ ಹೊಡೆದಿದ್ದಾರಾ? ಅಲ್ಲಿ ಆಗಿರುವುದು ಬಾಂಬ್ ಸ್ಪೋಟ. ಇದು ಭಯೋತ್ಪಾದಕರ ಕೃತ್ಯ. ಇದು ಗುಪ್ತಚರ ಇಲಾಖೆಯ ವೈಫಲ್ಯ. ಈ ವೈಫಲವ್ಯವನ್ನು ಸಿಎಂ ಮೊದಲು ಒಪ್ಪಿಕೊಳ್ಳಬೇಕು. ಭಯೋತ್ಪಾದಕರನ್ನ ಮೊದಲು ಪತ್ತೆ ಹಚ್ಚಬೇಕು ಎಂದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರಕ್ಕೆ ಮಾತನಾಡಿ, ಮೊದಲು ಎಫ್ಎಸ್ಎಲ್ ವರದಿ ಬಹಿರಂಗ ಮಾಡಿ. ನೀವು ತಡ ಮಾಡಿದಷ್ಟು ನೀವು ವರದಿ ತಿರುಚುತ್ತಿದ್ದಾರೆ ಎಂಬ ಅನುಮಾನ ಜಾಸ್ತಿಯಾಗುತ್ತದೆ. ವರದಿ ಬರುವ ಮುನ್ನವೇ ಕೆಲ ಸಚಿವರು ಅಂತಹ ಘಟನೆ ನಡೆದೇ ಇಲ್ಲ ಎಂದಿದ್ದಾರೆ. ಹೀಗಾಗಿ ವರದಿಗೆ ಏನು ಬೆಲೆ? ನಮ್ಮ ಪ್ರಕಾರ ಎಫ್ಎಸ್ಎಲ್ ವರದಿ ಬಂದಿದೆ. ಸರ್ಕಾರ ಅದನ್ನ ಮುಚ್ಚಿಡುವ ಯತ್ನ ಮಾಡುತ್ತಿದೆ. ಜನ ನಿಮ್ಮ ವರದಿ ಬಿಡುಗಡೆಗೆ ಕಾಯುತ್ತಿದ್ದಾರೆ. ನೀವು ಮುಸ್ಲಿಮರ ಪರವಾಗಿಯೇ ಇರಿ. ಆದರೆ ಭಯೋತ್ಪಾದಕ ಚಟುವಟಿಕೆ ನಡೆಸುವವರನ್ನ ದೇಶ ದ್ರೋಹಿಗಳನ್ನು ರಕ್ಷಿಸಬೇಡಿ ಎಂದರು.

Related Post