Breaking
Sat. Apr 20th, 2024

ದೇಹ ಗಟ್ಟಿ ಆಗುತ್ತದೆ ಎಂದು 39 ನಾಣ್ಯ,37 ಅಯಸ್ಕಾಂತಗಳನ್ನು ನುಂಗಿದ 26 ವರ್ಷದ ವ್ಯಕ್ತಿ

By Mooka Nayaka News Feb 27, 2024
Spread the love

ನವದೆಹಲಿ: ದೇಹ ಗಟ್ಟಿಯಾಗುತ್ತದೆ ಎಂದು ವ್ಯಕ್ತಿಯೊಬ್ಬ ನಾಣ್ಯಗಳು ಹಾಗೂ ಅಯಸ್ಕಾಂತಗಳನ್ನು ನುಂಗಿದ್ದಾನೆ.!

26 ವರ್ಷದ ವ್ಯಕ್ತಿ ಕಳೆದ 20 ದಿನಗಳಿಂದ ಪದೇ ಪದೇ  ವಾಂತಿ ಮತ್ತು ಹೊಟ್ಟೆ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಕಾರಣದಿಂದ ಅವರನ್ನುಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ರೋಗಿಯ ಎಕ್ಸ್-ರೇ ಮಾಡಿ ಆ ಬಳಿಕ ಸಿಟಿ ಸ್ಕ್ಯಾನ್‌ ನಡೆಸಲಾಗಿದೆ. ಸಿಟಿ ಸ್ಕ್ಯಾನ್‌ ನಲ್ಲಿ ರೋಗಿಯ ಹೊಟ್ಟೆಯಲ್ಲಿ ನಾಣ್ಯ ಹಾಗೂ ಆಯಸ್ಕಾಂತಗಳು ಇರುವುದು ಪತ್ತೆ ಆಗಿದೆ.

ವೈದ್ಯರು ಶಸ್ತ್ರಚಿಕಿತ್ಸೆಯನ್ನು ನಡೆಸಿ ಹೊಟ್ಟೆಯಿಂದ 39 ನಾಣ್ಯಗಳು ಮತ್ತು 37 ಅಯಸ್ಕಾಂತಗಳನ್ನು ಹೊರತೆಗೆದಿದ್ದಾರೆ. ರೋಗಿಯ ಹೊಟ್ಟೆಯಿಂದ 1, 2, 5 ರೂ. ನಾಣ್ಯಗಳು ಮತ್ತು 37 ಹೃದಯ, ಗೋಳ, ನಕ್ಷತ್ರ, ಬುಲೆಟ್ ಮತ್ತು ತ್ರಿಕೋನ ಆಕಾರದ ಆಯಸ್ಕಾಂತಗಳನ್ನು ಹೊರತೆಗೆಯಲಾಗಿದೆ  ಎಂದು ವೈದ್ಯರು ತಿಳಿಸಿದ್ದಾರೆ.

ರೋಗಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು,ಈ ಹಿಂದೆಯೂ ಇದೇ ರೀತಿ ನಾಣ್ಯ ಹಾಗೂ ಆಯಸ್ಕಾಂತಗಳನ್ನು ನುಂಗಿದ್ದ ಎಂದು ಕುಟುಂಬಸ್ಥರು ಹೇಳಿದ್ದಾರೆ.

Related Post