Trending

ಶಿಕಾರಿಪುರದಲ್ಲಿ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು

Spread the love

ಶಿವಮೊಗ್ಗ: ದರೋಡೆ ಪ್ರಕರಣದ ಆರೋಪಿಯೊಬ್ಬನ ಕಾಲಿಗೆ ಪೊಲೀಸರು ಗುಂಡೇಟು ಇಳಿಸಿದ ಘಟನೆ ಜಿಲ್ಲೆಯ ಶಿಕಾರಿಪುರದಲ್ಲಿ ನಡೆದಿದೆ.

ಆರೋಪಿ ಶ್ರೀನಿವಾಸ್ (25) ಕಾಲಿಗೆ ಪೊಲೀಸರ ಗುಂಡೇಟು ಹಾರಿಸಿ, ಬಂಧಿಸಿದ್ದಾರೆ.

ತೀರ್ಥಹಳ್ಳಿ ತಾಲೂಕಿನ ಮಹಿಷಿ ಮಠ ಹಾಗೂ ಇತರೆಡೆಗಳಲ್ಲಿ ಡಕಾಯಿತಿ ನಡೆಸಿದ್ದ ಆರೋಪಿ ಶ್ರೀನಿವಾಸ್ ನನ್ನು ಬಂಧಿಸಲೆಂದು ಮಾಳೂರು ಠಾಣೆ ಪೊಲೀಸರು ತೆರಳಿದ್ದರು.

ಶಿಕಾರಿಪುರ ಸಮೀಪದ ಕೆಂಗುಡ್ಡೆ ಬಳಿ ಘಟನೆ ನಡೆದಿದೆ. ಆರೋಪಿ ಶ್ರೀನಿವಾಸ ಪೊಲೀಸ್ ಸಿಬ್ಬಂದಿ ಸಂತೋಷ್ ಹಾಗೂ ಪಿಎಸ್‌ಐ ಕುಮಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಶ್ರೀನಿವಾಸ್ ಗೆ ಶರಣಾಗಲು ಸಬ್ ಇನ್ಸ್ಪೆಕ್ಟರ್ ಕುಮಾರ್ ಸೂಚಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚನೆ ನೀಡಿದರೂ ಮಾತು ಕೇಳದ ಹಿನ್ನೆಲೆಯಲ್ಲಿ ಪಿಎಸ್‌ಐ ಕುಮಾರ್ ಆರೋಪಿ ಕಾಲಿಗೆ ಫೈರಿಂಗ್‌ ಮಾಡಿದ್ದಾರೆ.

ಬಳಿಕ ಆರೋಪಿ ಶ್ರೀನಿವಾಸ್ ನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಶಿಕಾರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[pj-news-ticker]