Breaking
Tue. Jul 16th, 2024

ಸಿಂಹಗಳಿಗೆ ಅಕ್ಬರ್-ಸೀತಾ ಎಂದು ನಾಮಕರಣ ಮಾಡಿದ್ದ ಹಿರಿಯ ಐಎಫ್ಎಸ್ ಅಧಿಕಾರಿ ಅಮಾನತು!

By Mooka Nayaka News Feb 26, 2024
Spread the love

ಅಗರ್ತಲಾ: ಮೃಗಾಲಯದಲ ಸಿಂಹ ಮತ್ತು ಸಿಂಹಿಣಿಗೆ ಅಕ್ಬರ್-ಸೀತಾ ಎಂದು ನಾಮಕರಣ ಮಾಡಿದ ಹಿರಿಯ ಐಎಫ್ ಎಸ್ ಅಧಿಕಾರಿಯನ್ನು ಸರ್ಕಾರ ಇದೀಗ ಅಮಾನತುಗೊಳಿಸಿದೆ.

ನಾಮಕರಣದ ವಿವಾದದ ನಡುವೆ, ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಬಿನ್ ಲಾಲ್ ಅಗರ್ವಾಲ್ ರನ್ನು ಸರ್ಕಾರ ಅಮಾನತುಗೊಳಿಸಿದೆ. ಈ ಹೆಸರುಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಲ್ಕತ್ತಾ ಹೈಕೋರ್ಟ್‌ನಲ್ಲಿ ದೂರಿನ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.

ಮೃಗಾಲಯದಲ್ಲಿ ಇದ್ದ ಸಿಂಹಕ್ಕೆ ಅಕ್ಬರ್ ಎಂದು ಹಾಗೂ ಸಿಂಹಿಣಿಗೆ ಸೀತಾ ಎಂದು ನಾಮಕರಣ ಮಾಡಿದ್ದ ವಿಚಾರ ತೀವ್ರ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ತ್ರಿಪುರಾ ಸರ್ಕಾರ ತನ್ನ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಯನ್ನು ಅಮಾನತು ಮಾಡಿದೆ. ಈ ವಿವಾದ ಸಂಬಂಧ ವಿಶ್ವ ಹಿಂದೂ ಪರಿಷತ್ ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ದೂರು ಸಲ್ಲಿಕೆ ಮಾಡಿದ್ದ ಹಿನ್ನೆಲೆಯಲ್ಲಿ ಪ್ರಬೀನ್ ಲಾಲ್ ಅಗರ್ವಾಲ್ ಅವರನ್ನು ಅಮಾನತು ಮಾಡಲಾಗಿದೆ. ಈ ರೀತಿಯ ಹೆಸರು ಇಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಹಿಂದೂ ಪರ ಸಂಘಟನೆ ಆರೋಪ ಮಾಡಿತ್ತು.

ಸಿಂಹ ಹಾಗೂ ಸಿಂಹಿಣಿಯನ್ನು ಫೆಬ್ರವರಿ 12 ರಂದೇ ತ್ರಿಪುರಾದ ಸೆಪಾಹಿಜಲ ಮೃಗಾಲಯದಿಂದ ಸಿಲಿಗುರಿಯ ಉತ್ತರ ಬಂಗಾಳ ವನ್ಯ ಮೃಗಗಳ ಉದ್ಯಾನಕ್ಕೆ ವರ್ಗಾವಣೆ ಮಾಡಲಾಗಿತ್ತು. ವನ್ಯಜೀವಿಗಳ ವಿನಿಮಯ ಕಾರ್ಯಕ್ರಮದ ಅಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.ಸಿಂಹ ಹಾಗೂ ಸಿಂಹಿಣಿಯನ್ನು ತ್ರಿಪುರಾದಿಂದ ಪಶ್ಚಿಮ ಬಂಗಾಳ ರಾಜ್ಯದ ಸಿಲಿಗುರಿಯಲ್ಲಿ ಇರುವ ಉತ್ತರ ಬಂಗಾಳ ವನ್ಯ ಮೃಗಗಳ ಉದ್ಯಾನಕ್ಕೆ ಕರೆ ತಂದ ಬಳಿಕ ಈ ವಿವಾದ ಭುಗಿಲೆದ್ದಿತ್ತು.

1994ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿರುವ ಅಗರ್ವಾಲ್ ಅವರು ತ್ರಿಪುರ ಮುಖ್ಯ ವೈಲ್ಡ್ ಲೈಫ್ ವಾರ್ಡನ್ ಆಗಿದ್ದರು. ಫೆಬ್ರವರಿ 12 ರಂದು ಪ್ರಾಣಿ ವಿನಿಮಯ ಕಾರ್ಯಕ್ರಮದ ಭಾಗವಾಗಿ ತ್ರಿಪುರಾ ಮೃಗಾಲಯದಿಂದ ಉತ್ತರ ಬಂಗಾಳಕ್ಕೆ ಸಿಂಹಗಳನ್ನು ಸ್ಥಳಾಂತರಿಸಲಾಯಿತು.ಆ ಸಮಯದಲ್ಲಿ ರಿಜಿಸ್ಟರ್‌ನಲ್ಲಿ ಪ್ರಾಣಿಗಳ ಹೆಸರನ್ನು ನಮೂದಿಸಿದವರು ಅಗರ್ವಾಲ್. ತ್ರಿಪುರಾ ಮೃಗಾಲಯದ ಅಧಿಕಾರಿಗಳು ಸಿಂಹಗಳ ಹೆಸರನ್ನು ನೀಡಿದ್ದಾರೆ ಎಂದು ಬಂಗಾಳ ಅರಣ್ಯ ಇಲಾಖೆ ಕೊಲ್ಕತ್ತಾ ಹೈಕೋರ್ಟ್‌ಗೆ ತಿಳಿಸಿದೆ.

ವಿಎಚ್‌ಪಿ ದೂರಿನ ಮೇರೆಗೆ ಸಿಂಹ ಜೋಡಿಯ ಹೆಸರನ್ನು ಬದಲಾಯಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

Related Post