Trending

‘ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸೋಣ, ಯಾರು ಗೆಲ್ಲುತ್ತಾರೆ ನೋಡೋಣ’ : ವಿಜಯೇಂದ್ರಗೆ ಯತ್ನಾಳ್​ ಸವಾಲು

Spread the love

ಹುಬ್ಬಳ್ಳಿ: “ನೀನು ರಾಜೀನಾಮೆ ಕೊಡು, ನಾನು ರಾಜೀನಾಮೆ ಕೊಡ್ತೀನಿ. ಚುನಾವಣೆಗೆ ಹೋಗೋಣ, ಯಾರು ಗೆಲ್ಲುತ್ತಾರೆ ನೋಡೋಣ” ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಸವಾಲು ಹಾಕಿದ್ದಾರೆ.

ನಗರದ ಮೂರುಸಾವಿರ ಮಠದ ಸ್ವಾಮೀಜಿ‌ ಭೇಟಿ‌ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಕೇವಲ ಭಗವಾ ಧ್ವಜದ ಮೇಲೆ ಗೆಲ್ಲುತ್ತೇನೆ. ನನಗೆ ಮುಸ್ಲಿಮರ ವೋಟ್ ಬೇಡ. ವಿಜಯೇಂದ್ರ ನಿನಗೆ ತಾಕತ್ ಇದೆಯಾ? ಎಂದು ಪ್ರಶ್ನಿಸಿದ ಅವರು, ವಿಜಯೇಂದ್ರ ನಿನಗೆ ಧಮ್ ಇದ್ರೆ ನನ್ನ ಬಗ್ಗೆ ನೇರವಾಗಿ ಮಾತನಾಡು” ಎಂದು ಹರಿಹಾಯ್ದರು.

“ಬಿಜೆಪಿ ಕುಟುಂಬ ರಾಜಕಾರಣ ಅದರಲ್ಲೂ ಯಡಿಯೂರಪ್ಪ ಕುಟುಂಬದಿಂದ ಮುಕ್ತಿ ಆದ ಮೇಲೆ ನಾನು ಮತ್ತೆ ಹೋಗುತ್ತೇನೆ. ನಾನು ಒಳ್ಳೆಯವನು. ಆದರೆ, ದುಷ್ಟರಿಗೆ ನಾನು ದುಷ್ಟ. ಪಂಚಮಸಾಲಿ ಟ್ರಸ್ಟ್ ನ ಪ್ರಭಣ್ಣ ಮಠದ ಆಸ್ತಿಯನ್ನು ಹೊಡೆದಿದ್ದಾರೆ. ಕೂಡಲ ಸಂಗಮದ ಆಸ್ತಿಯನ್ನು ತನ್ನ ಕುಟುಂಬದ ಆಸ್ತಿ ಮಾಡಿಕೊಂಡಿದ್ದಾನೆ” ಎಂದು ಯತ್ನಾಳ್​ ಗಂಭೀರ ಮಾಡಿದರು.

“ಸ್ವಾಮೀಜಿಗಳನ್ನು ರಾಜಕೀಯವಾಗಿ ಉಪಯೋಗ ಮಾಡಿಕೊಳ್ಳುವ ಸಂಸ್ಕೃತಿ ನನ್ನದಲ್ಲ. ಯಾರು ಸ್ವಾಮೀಜಿಗಳನ್ನು ಉಪಯೋಗಿಸಿಕೊಳ್ಳುತ್ತಾರೆ ಅನ್ನೋದು ನಿಮಗೆ ಗೊತ್ತಿದೆ. ಮಠಮಾನ್ಯಗಳಿಗೆ ದುಡ್ಡು ಕೊಟ್ಟಿದ್ದು ನಾವೇ ಅಂತ ಬಹಳ ಮಾತಾಡ್ತಾರೆ” ಎಂದು ವಾಗ್ದಾಳಿ ನಡೆಸಿದರು.

“ನಮ್ಮ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಮೂರುಸಾವಿರ ಮಠದ ಶ್ರೀಗಳನ್ನು ಭೇಟಿಯಾಗಿದ್ದೇನೆ. ಮೊದಲಿನಿಂದಲೂ ನಮ್ಮ ಮತ್ತು ನಮ್ಮ ಸಂಸ್ಥೆಗಳ ಮೇಲೆ ಶ್ರೀಗಳ ಆಶೀರ್ವಾದವಿದೆ. ಅದೇ ಗೌರವದೊಂದಿಗೆ ಇವತ್ತು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇನೆ. ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ನಾನು ಯಾವುದೇ ಸ್ವಾಮೀಜಿಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲ್ಲ” ಎಂದು ಯತ್ನಾಳ್​ ಸ್ಪಷ್ಟಪಡಿಸಿದರು.

[pj-news-ticker]