Trending

ಶಿವಮೊಗ್ಗ : ಕೊಳಕು ಮಂಡಲ ಹಾವನ್ನು ನುಂಗಲು ಯತ್ನಿಸಿದ ನಾಗರಹಾವು

Spread the love

ಶಿವಮೊಗ್ಗ : ನಗರದ ಹೊರವಲಯ ಪಶು ವೈದ್ಯಕೀಯ ಕಾಲೇಜಿನ ಬಾಲಕರ ಹಾಸ್ಟೆಲ್ ಬಳಿ ವಿಷಪೂರಿತ ನಾಗರಹಾವು ಹಾಗೂ ಕೊಳಕು ಮಂಡಲ ಹಾವುಗಳ ನಡುವೆ ಕಾಳಗ ಏರ್ಪಟ್ಟು, ಕೊನೆಗೆ ಕೊಳಕು ಮಂಡಲ ಹಾವನ್ನೇ ನಾಗರಹಾವು ನುಂಗಲು ಯತ್ನಿಸಿದ ಅಪರೂಪದ ಘಟನೆ ಇತ್ತೀಚೆಗೆ ನಡೆದಿದೆ.

ಸುಮಾರು 5 ಅಡಿ ಉದ್ದದ ನಾಗರ ಹಾವೊಂದು, ಹಾಸ್ಟೆಲ್‌ನ ಒಳ ಆವರಣದಲ್ಲಿ ಕಾಣಿಸಿಕೊಂಡಿತ್ತು.

ನಂತರ ಹಾಸ್ಟೆಲ್ ಕಟ್ಟಡ ಪಕ್ಕದ ಬಿಲದಲ್ಲಿ ಸೇರಿಕೊಂಡಿದೆ. ಇದೇ ಬಿಲದಲ್ಲಿ ಸುಮಾರು ಮೂರು ಅಡಿ ಉದ್ದದ ಕೊಳಕು ಮಂಡಲ ಹಾವು ಮೊದಲೇ ಅಡಗಿಕೊಂಡಿತ್ತು. ಈ ವೇಳೆ ಎರಡು ಹಾವುಗಳ ನಡುವೆ ಕಾದಾಟ ಏರ್ಪಟ್ಟಿದ್ದು, ಬಿಲದಿಂದ ಹೊರಬಂದಿವೆ.

ಕಾಳಗದಲ್ಲಿ ಕೊಳಕು ಮಂಡಲ ಹಾವನ್ನು ಮಣಿಸಿದ ನಾಗರಹಾವು, ಮಂಡಲ ಹಾವನ್ನೇ ನುಂಗಲು ಮುಂದಾಗಿದೆ. ಬೃಹದಾಕಾರದ ವಿಷಪೂರಿತ ಹಾವುಗಳ ಸೆಣಸಾಟ ಕಂಡ ಹಾಸ್ಟೆಲ್ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ.

ಕೆಲ ಗಂಟೆಗಳ ನಂತರ ಅರ್ಧ ನುಂಗಿದ್ದ ಕೊಳಕು ಮಂಡಲ ಹಾವನ್ನು ಬಳಿಕ ನಾಗರಹಾವು ಹೊರ ಹಾಕಿದೆ. ನಂತರ ನಾಗರಹಾವನ್ನು ಸ್ನೇಕ್ ಕಿರಣ್ ಸಂರಕ್ಷಣೆ ಮಾಡಿದ್ದಾರೆ. ಸತ್ತಂತೆ ಕೆಳಕ್ಕೆ ಬಿದ್ದಿದ್ದ ಕೊಳಕು ಮಂಡಲ ಹಾವು, ಕ್ರಮೇಣ ಚೇತರಿಸಿಕೊಂಡು ಸ್ಥಳದಿಂದ ಹೋಗಲು ಮುಂದಾಗಿದೆ. ತಕ್ಷಣವೇ ಮಂಡಲ ಹಾವನ್ನು ರಕ್ಷಣೆ ಮಾಡಲಾಯಿತು.

[pj-news-ticker]