Trending

‘ನಿಮ್ಮ ಬಳಿ ಏನೋ ಗುಪ್ತವಾಗಿ ಮಾತನಾಡಬೇಕಿದೆʼ ಎಂದಿದ್ದಳು : ಹನಿಟ್ರ್ಯಾಪ್ ಸಂಚು ಬಿಚ್ಚಿಟ್ಟ ಸಚಿವ ರಾಜಣ್ಣ

Spread the love

ತುಮಕೂರು : ಹನಿಟ್ರ್ಯಾಪ್ ಮಾಡಲು ಬಂದಿದ್ದ ಇಬ್ಬರು ಹುಡುಗಿಯರು ಬೆಂಗಳೂರಿನ ನಮ್ಮ ಮನೆಯ ಬಳಿ ಬಂದು ʼನಿಮ್ಮ ಬಳಿ ಏನೋ ಗುಪ್ತವಾಗಿ ಮಾತನಾಡಬೇಕಿದೆʼ ಎಂದಿದ್ದರು ಎಂದು ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ.

ಈ ಬಗ್ಗೆ ಸ್ವತಃ ರಾಜಣ್ಣ ಅವರೇ ಮಾತನಾಡಿದ್ದು, ಎರಡು ಬಾರಿ ನನ್ನನ್ನು ಭೇಟಿಯಾಗಿದ್ದರು. ʼಮೊದಲ ದಿನ ಒಬ್ಬ ಹುಡುಗ ಬಂದಿದ್ದ, ಎರಡು ಸಲವೂ ಅವನೇ ಬಂದಿದ್ದ. ಆದ್ರೆ ಎರಡೂ ಸಲ ಹೆಣ್ಣು ಮಕ್ಕಳು ಬೇರೆ ಬೇರೆ ಇದ್ದರು. ಹುಡುಗಿಯರು ಒಂದು ಜೀನ್ಸ್ ಬ್ಲೂ ಟಾಪ್ ಹಾಕಿದ್ದರು. ಹುಡುಗಿಯು ಹೈಕೋರ್ಟ್​ ಲಾಯರ್ ಎಂದು ಹೇಳಿಕೊಂಡಿದ್ದಳುʼ ಎಂದಿದ್ದಾರೆ.

ಮೊದಲು ಬಂದಾಗ ಹೈಕೋರ್ಟ್​ ಲಾಯರ್ ಎಂದು ಹೇಳಿರಲಿಲ್ಲ. ಎರಡನೇ ಸಲ ಬಂದಾಗ ಲಾಯರ್ ಎಂದು ಹೇಳಿಕೊಂಡಿದ್ದಳು. ಯಾವುದೇ ಪ್ರಕರಣದ ಬಗ್ಗೆ ಮಾತನಾಡಲು ಅಲ್ಲ, ಬದಲಾಗಿ ನಿಮ್ಮ ಬಳಿ ಏನೋ ಗುಪ್ತವಾಗಿ ಮಾತನಾಡಬೇಕಿದೆ ಎಂದು ಹೇಳಿದ್ದಳು. ಅವರ ಪೋಟೋ ತೋರಿಸಿದರೆ ಗುರುತು ಹಿಡಿಯುತ್ತೇನೆ. ಈ ಕುರಿತಂತೆ ಎಲ್ಲವನ್ನು ದೂರಿನಲ್ಲಿ ಬರೆದಿದ್ದೇನೆ ಎಂದರು.

ಗೃಹಮಂತ್ರಿಗೆ ದೂರು ಕೊಡುತ್ತೇನೆ, ಆ ದೂರಿನಲ್ಲಿ ಯಾವುದೇ ಮಟಿರಿಯಲ್ ಎವಿಡೆನ್ಸ್​ ಇಲ್ಲ. ಅಲ್ಲದೆ ಬೆಂಗಳೂರಿನ ಮನೆಯಲ್ಲಿ ಸಿಸಿ ಕ್ಯಾಮೆರಾಗಳನ್ನೇ ಹಾಕಿಲ್ಲ ಎಂದರು. ಅವತ್ತು ಯಾರು ಮನೆಗೆ ಬಂದು ಹೋಗಿದ್ದಾರೋ ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದಿದ್ದೇನೆ ಎಂದು ತಿಳಿಸಿದರು.

[pj-news-ticker]