ಭದ್ರಾವತಿ : ತಾಲ್ಲೂಕಿನ ಬಾರಂದೂರು ಸಮೀಪ ಭದ್ರಾ ನದಿ ಸೇತುವೆ ಬಳಿ ಚಿರತೆಯ ಮೃತದೇಹ ಸೋಮವಾರ (ಜ.27) ಪತ್ತೆಯಾಗಿದ್ದು, ಕೊಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ವಿಚಾರ ತಿಳಿಯುತ್ತಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹ ವಶಕ್ಕೆ ಪಡೆದಿದ್ದಾರೆ.
ಸ್ಥಳೀಯರು ಚಿರತೆ ಮೃತದೇಹ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಲೇ ದೊಡ್ಡ ಸಂಖ್ಯೆಯ ಜನರು ಸೇತುವೆ ಬಳಿ ಜಮಾಯಿಸಿದ್ದರು.
ಸಾಯಿಸಿ, ತಂದು ಹಾಕಿರುವ ಶಂಕೆ
ಚಿರತೆಯನ್ನು ಸಾಯಿಸಿ ಇಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಈ ಭಾಗದಲ್ಲಿ ಚಿರತೆ ಓಡಾಟವಿಲ್ಲ. ಆದರೆ ಬೇರಡೆ ಇದನ್ನು ಕೊಂದು ಇಲ್ಲಿಗೆ ತಂದು ಹಾಕಿರುವ ಸಾಧ್ಯತೆಯಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಭದ್ರಾವತಿ ವಲಯ ಡಿಎಫ್ಒ ಆಶೀಶ್ ರೆಡ್ಡಿ ತಿಳಿಸಿದ್ದಾರೆ.
