Trending

ತೀರ್ಥಹಳ್ಳಿ : ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ – ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ

Spread the love

ತೀರ್ಥಹಳ್ಳಿ: ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ಮರದ ಕೊಂಬೆ ತುಂಡಾಗಿ ಬಿದ್ದ ಪರಿಣಾಮ ಓರ್ವರಿಗೆ ಗಂಭೀರ ಗಾಯವಾಗಿದ್ದು, ಇನ್ನೊಬ್ಬರ ಕಾಲು ಮೂಳೆ ಮುರಿದಿರುವ ಘಟನೆ ಇಂದು ಮೇಗರವಳ್ಳಿ ಸಮೀಪ ನಡೆದಿದೆ.

ತಾಲೂಕಿನ ಮೇಗರವಳ್ಳಿ ಫಾರೆಸ್ಟ್ ಆಫೀಸ್ ಬಳಿ ಮರ ಬಿದ್ದಿದ್ದರಿಂದ ಬೈಕ್ ಕೂಡ ಸಂಪೂರ್ಣ ಜಖಂಗೊಂಡಿದೆ. ಸದ್ಯ ಗಾಯಳುಗಳನ್ನು ತೀರ್ಥಹಳ್ಳಿಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ಈ ಘಟನೆ ಹಿನ್ನಲೆ ಮೇಗರವಳ್ಳಿ ಅರಣ್ಯ ಇಲಾಖೆಯ ಅಧಿಕಾರಿಗಳು ಮರ ಕಡಿಸದೆ ಇದ್ದ ಕಾರಣ ನಡೆದಿದೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದು, ಅದರ ಜೊತೆಗೆ ಗಾಯಳುಗಳ ಚಿಕಿತ್ಸೆಗೆ ಪರಿಹಾರವನ್ನು ಅರಣ್ಯ ಇಲಾಖೆಯೇ ಭರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

[pj-news-ticker]