ತೀರ್ಥಹಳ್ಳಿ: ತುಂಗಾ ನದಿಯ ದಡದಲ್ಲಿ ಚಪ್ಪಲಿ, ಮೊಬೈಲ್ ಬಿಟ್ಟು ಬ್ಯಾಂಕ್ ಮ್ಯಾನೇಜರ್ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಅವರ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ.
ತಾಲೂಕಿನ ಅರಳಸುರುಳಿಯ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಶ್ರೀವತ್ಸ (38) ವರ್ಷ ಸೋಮವಾರ ಬೆಳಗ್ಗೆ ನೀರಿಗೆ ಇಳಿದಿದ್ದರು. ನಂತರ ತುಂಗಾ ನದಿಯಲ್ಲಿ ನಾಪತ್ತೆಯಾಗಿದ್ದ ಶಂಕೆ ವ್ಯಕ್ತವಾಗಿತ್ತು. ನದಿ ದಡದಲ್ಲಿ ಮೊಬೈಲ್, ಬಟ್ಟೆ, ಚಪ್ಪಲಿ ಆಧಾರದಲ್ಲಿ ಅವರು ಬ್ಯಾಂಕ್ ಮ್ಯಾನೇಜರ್ ಎಂದು ಹೇಳಲಾಗಿತ್ತು.
ತುಂಗಾ ನದಿಯಲ್ಲಿ ಅಗ್ನಿಶಾಮಾಕದಳ, ಪೊಲೀಸರು ಸಿಬ್ಬಂದಿಗಳು ಮಂಗಳವಾರ ಸ್ಥಳದಲ್ಲಿ ಹುಡುಕಾಟ ನಡೆಸಿದ್ದರು. ಬ್ಯಾಂಕ್ ಮ್ಯಾನೇಜರ್ ಒಬ್ಬರೇ ತೀರ್ಥಹಳ್ಳಿಯಲ್ಲಿ ಇದ್ದರು ಎಂದು ಹೇಳಲಾಗುತ್ತಿದ್ದು ಸಂಬಂಧಿಕರು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.
