ಶಿವಮೊಗ್ಗ: ಹೊಸನಗರ ತಾಲೂಕಿನಲ್ಲಿ ಕೆಎಫ್ ಡಿ ವೈರಸ್ ವೇಗವಾಗಿ ಹರಡುತ್ತಿದ್ದು ಈವರೆಗೆ ಒಟ್ಟು 10 ಮಂದಿ ಪಾಸಿಟಿವ್ ಗೆ ಒಳಗಾಗಿದ್ದಾರೆ.
ಸೊನಲೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಮೊದಲು ಪ್ರಕರಣ ದಾಖಲಾಗಿತ್ತು. ಇದಕ್ಕೆ ಮತ್ತೆರಡು ಪ್ರಕರಣ ಸೇರ್ಪಡೆಯಾಗಿದೆ. ಬಿಳ್ಳೊಡಿ ಸಮೀಪದ ಅರಳಸುರಳಿಯಲ್ಲಿ 2 ಪ್ರಕರಣ ಪತ್ತೆಯಾಗಿದೆ. ಒಟ್ಟು 10 ಪ್ರಕರಣಗಳು ವರದಿಯಾಗಿದ್ದು ಎಲ್ಲರೂ 50ರಿಂದ 60 ವರ್ಷ ವಯೋಮಾನದವರಾಗಿದ್ದಾರೆ.
